alex Certify
ಕನ್ನಡ ದುನಿಯಾ       Mobile App
       

Kannada Duniya

ಗಲ್ಫ್ ದೇಶಗಳಲ್ಲೂ ಘರ್ಜಿಸಿದ ಸುದೀಪ್ ‘ಹೆಬ್ಬುಲಿ’

gulf-hebuli-sudeep

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ 50 ನೇ ದಿನದ ಹೊಸ್ತಿಲಲ್ಲಿದೆ. ಗಲ್ಫ್ ಕಂಟ್ರಿಗಳಲ್ಲೂ ‘ಹೆಬ್ಬುಲಿ’ ಘರ್ಜಿಸುತ್ತಿದೆ.

ಸುದೀಪ್ ವರ್ಲ್ಡ್ ವೈಡ್ ಫ್ಯಾನ್ಸ್ ಗಳನ್ನು ಈ ಚಿತ್ರ ಪರಿಚಯಿಸಿದೆ. ಗಲ್ಫ್ ದೇಶಗಳಲ್ಲಿ ದಾಖಲೆಯ ಬಿಡುಗಡೆ ಕಂಡಿದೆ. 5 ವರ್ಷಗಳ ಬಳಿಕ ಗಲ್ಫ್ ದೇಶಗಳಲ್ಲಿ ಕನ್ನಡ ಚಿತ್ರವೊಂದು ದಾಖಲೆಯ ಪ್ರಮಾಣದಲ್ಲಿ ಪ್ರದರ್ಶನ ಕಾಣುತ್ತಿದೆ. ಸುದೀಪ್ ವೃತ್ತಿ ಬದುಕಿನಲ್ಲೇ ಭರ್ಜರಿ ಓಪನಿಂಗ್ ಮತ್ತು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದಾಗಿದೆ.

ಕುವೈತ್, ಕತಾರ್, ಶಾರ್ಜಾ ಮೊದಲಾದ ಕಡೆಗಳಲ್ಲಿ ಬರೋಬ್ಬರಿ 22 ಸ್ಕ್ರೀನ್ ಗಳಲ್ಲಿ ‘ಹೆಬ್ಬುಲಿ’ ದಿನಕ್ಕೆ 50 ಕ್ಕೂ ಅಧಿಕ ಪ್ರದರ್ಶನ ಕಾಣುತ್ತಿದೆ.

ಅಲ್ಲಿನ ಕನ್ನಡಿಗರು ಮಾತ್ರವಲ್ಲದೇ, ಬೇರೆ ಭಾಷೆಗಳ ಜನ ಕೂಡ ‘ಹೆಬ್ಬುಲಿ’ ವೀಕ್ಷಿಸಿದ್ದಾರೆ. ಸುದೀಪ್ ಕನ್ನಡ ಮಾತ್ರವಲ್ಲದೇ, ಹಿಂದಿ, ತೆಲುಗು, ತಮಿಳಿನಲ್ಲಿಯೂ ಮಿಂಚಿದ್ದು, ಅವರ ಅಭಿಮಾನಿ ವರ್ಗ ದೊಡ್ಡದಾಗಿದೆ. ಗಲ್ಫ್ ಕಂಟ್ರೀಸ್ ಕನ್ನಡ ಮೂವೀಸ್ ಬಳಗದಿಂದ ಸುದೀಪ್ ‘ಹೆಬ್ಬುಲಿ’ ಚಿತ್ರದ ಆಡ್ ಗಳನ್ನು ಅಲ್ಲಿನ ಲೋಕಲ್ ಹಾಗೂ ನ್ಯಾಷನಲ್ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.

ಬಿಗ್ಗೆಸ್ಟ್ ಓಪನ್ ಪಡೆದುಕೊಂಡಿರುವ ‘ಹೆಬ್ಬುಲಿ’ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಸಾಗರದಾಚೆಗೂ ‘ಹೆಬ್ಬುಲಿ’ ಹೈಪ್ ಕ್ರಿಯೇಟ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...