alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಪ್ಟಂಬರ್ 16 ರಂದು ಸುದೀಪ್ ಅಭಿಮಾನಿಗಳಿಗೆ ಹಬ್ಬ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ ಇಲ್ಲಿದೆ. ಇದೇ ಸೆಪ್ಟಂಬರ್ 16 ರಂದು ಮನೆಯಲ್ಲೇ ಕುಳಿತು ಬ್ಲಾಕ್ ಬಸ್ಟರ್ ಮೂವಿ ‘ಹೆಬ್ಬುಲಿ’ ಕಣ್ತುಂಬಿಕೊಳ್ಳಬಹುದಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಸೆಪ್ಟಂಬರ್ 16 ರಂದು ಸಂಜೆ 7.30 ಕ್ಕೆ ಸುದೀಪ್ ಅಭಿಯನಯದ ‘ಹೆಬ್ಬುಲಿ’ ಪ್ರಸಾರವಾಗಲಿದೆ.

ಸುದೀಪ್ ‘ಹೆಬ್ಬುಲಿ’ಯಲ್ಲಿ ಪ್ಯಾರಾ ಕಮಾಂಡೊ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ಅಮಲಾ ಪೌಲ್, ಚಿಕ್ಕಣ್ಣ, ರವಿಶಂಕರ್ ಮೊದಲಾದವರು ಅಭಿನಯಿಸಿದ್ದಾರೆ.

ರಘುನಾಥ್, ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿರುವ ಚಿತ್ರವನ್ನು ಕೃಷ್ಣ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಭರ್ಜರಿ ಯಶಸ್ಸು ಕಂಡು ಗಳಿಕೆಯಲ್ಲಿಯೂ ದಾಖಲೆ ಬರೆದಿದ್ದ ‘ಹೆಬ್ಬುಲಿ’ ಕಿರುತೆರೆಯಲ್ಲಿಯೂ ಗರ್ಜಿಸಲಿದೆ. ಸಿನಿಮಾ ನೋಡಿದವರು, ನೋಡದಿದ್ದವರು ‘ಹೆಬ್ಬುಲಿ’ಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...