alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗರಾಜ್ ಭಟ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಸ್ಪೆಷಲ್ ವಿಶ್

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಿರ್ದೇಶಕ, ಗೀತೆ ರಚನೆಕಾರ, ಚಿತ್ರಕಥೆ ಬರಹಗಾರ, ಗಾಯಕ ಹಾಗೂ ನಟ ಯೋಗರಾಜ್ ಭಟ್ ಸೋಮವಾರ ತಮ್ಮ 48 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇವರಿಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಹಾಗೇ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ತುಂಬಾ ವಿಶೇಷವಾಗಿ ಯೋಗರಾಜ್ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ನನ್ನ ಸ್ನೇಹಿತನಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಬರವಣಿಗೆ ಹಾಗೂ ಮನರಂಜಿಸುವ ಕಲೆ ಹೀಗೆಯೇ ಮುಂದುವರಿಯಲಿ ಎಂದು ಬಯಸುತ್ತೇನೆ” ಎಂದು ಹಾರೈಸಿದ್ದಾರೆ.

ನಿರ್ದೇಶಕ ಯೋಗ ರಾಜ್ ಭಟ್ ಅವರು ‘’ಪಂಚತಂತ್ರ” ಎಂಬ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಇದರಲ್ಲಿ ವಿಹಾನ್ ಗೌಡ ಹಾಗೂ ಅಕ್ಷರ ಗೌಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಯುವಕರ ಜೀವನದ ಕುರಿತಾದ ವಿಷಯವನ್ನು ಹೊಂದಿದೆ. ಜೊತೆಗೆ ಹಾಸ್ಯ ಹಾಗೂ ಪ್ರೀತಿಯ ಅಂಶವನ್ನು ಒಳಗೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...