alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೈಲ್ವಾನ್’ ಗಾಗಿ ಬರಲಿದ್ದಾನೆ ಹಾಲಿವುಡ್ ಫೈಟರ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ‘ಪೈಲ್ವಾನ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಪೈಲ್ವಾನ್ ಚಿತ್ರದಲ್ಲಿ ಅಭಿನಯಿಸ್ತಿದ್ದಾರೆ.

ಇದರ ನಡುವೆ ಕಿಚ್ಚ ಸುದೀಪ್, ಚಿತ್ರಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಇದೆಲ್ಲವನ್ನು ಮೀರಿದ ಲೇಟೆಸ್ಟ್ ನ್ಯೂಸ್ ಒಂದು ಪೈಲ್ವಾನ್ ಚಿತ್ರ ತಂಡದಿಂದ ಬಂದಿದೆ.

ಸ್ಯಾಂಡಲ್ವುಡ್ ಪೈಲ್ವಾನ್ ಹಾಲಿವುಡ್ ರೇಂಜ್ ನಲ್ಲಿ ಮಿಂಚಬೇಕು ಅನ್ನೋ ಕಾರಣಕ್ಕೆ ಸುದೀಪ್ ಹಾಲಿವುಡ್ ಸ್ಟಂಟ್ ಮಾಸ್ಟರ್ ನ್ನ ಕನ್ನಡಕ್ಕೆ ಕರೆ ತರ್ತಿದ್ದಾರೆ. ಹೌದು, ಪೈಲ್ವಾನ್ ಸಿನಿಮಾದ ಕೆಲ ಆಕ್ಷನ್ ಸೀಕ್ವೆನ್ಸ್ ಗಳನ್ನ ಹಾಲಿವುಡ್ ನ ಲರ್ನೆಲ್ ಸ್ಟೋವೆಲ್ ನಿರ್ದೇಶಿಸಲಿದ್ದಾರೆ.

ಕ್ಯಾಪ್ಟನ್ ಅಮೆರಿಕಾ, ಸಿವಿಲ್ ವಾರ್, ಹಂಗರ್ ಗೇಮ್ಸ್ ನಂತಾ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಲರ್ನೆಲ್, ಕನ್ನಡಕ್ಕೆ ಬರ್ತಿದ್ದಾರೆ. ಇದರಿಂದ ಪೈಲ್ವಾನ್ ಖ್ಯಾತಿ ಹಾಲಿವುಡ್ ವರೆಗೂ ವಿಸ್ತರಿಸೋದು ಖಾತ್ರಿಯಾದಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...