alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿರೇಕದ ಅಭಿಮಾನ: ಸುದೀಪ್ ವಾರ್ನಿಂಗ್

sude-abimani

ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಕೆಲವೊಮ್ಮೆ ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ಹೋಗುತ್ತದೆ.

‘ಹೆಬ್ಬುಲಿ’ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯ ಪ್ರವಾಸ ಕೈಗೊಂಡಿದ್ದ ಸುದೀಪ್, ಬೆಳಗಾವಿಗೆ ಬರಲಿಲ್ಲ ಎಂದು ಅವರ ಅಭಿಮಾನಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕರೆಸಿ ಮಾತನಾಡಿದ ಸುದೀಪ್, ಇನ್ನೊಮ್ಮೆ ಹಾಗೆಲ್ಲಾ ಮಾಡಬೇಡಿ ಎಂದು ತಿಳಿಸಿದ್ದು, ಬೆಳಗಾವಿಗೆ ಬರುವುದಾಗಿ ಭರವಸೆ ನೀಡಿದ್ದಾರೆ.

ಈ ನಡುವೆ ಸುದೀಪ್ ಅವರ ಫೋಟೋ ಎಡಿಟ್ ಮಾಡಿ ಕೆಲವರು, ದೇವತೆಯ ರೀತಿ ಚಿತ್ರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಅವರ ಅಭಿಮಾನಿಯೊಬ್ಬರು ಸುದೀಪ್ ಗಮನಕ್ಕೆ ತಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಹೀಗೆಲ್ಲಾ ಫೋಟೋ ಎಡಿಟ್ ಮಾಡಿ ಹಾಕಬೇಡಿ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ. ನಾನು ಮನುಷ್ಯ, ಹಾಗೆಯೇ ಇರಲು ಬಿಡಿ ಎಂದು ತಿಳಿಸಿದ್ದಾರೆ. ಯಾರ ಭಾವನೆಗಳಿಗೂ ಧಕ್ಕೆ ತರಬಾರದೆಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...