alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕಿಚ್ಚ ಸುದೀಪ್ ಕುರಿತಾದ ಇಂಟ್ರೆಸ್ಟಿಂಗ್ ಸುದ್ದಿ

sud-sud-sud

ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಅವರಿಗೆ, ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಗ್ಗನಾಡು ಗ್ರಾಮದ ಯುವಕರೆಲ್ಲಾ ಸುದೀಪ್ ಅಭಿಮಾನಿಗಳಾಗಿದ್ದು, ಮನೆಯಲ್ಲಿ ಸುದೀಪ್ ಫೋಟೋ ಇಟ್ಟು ಪೂಜಿಸುತ್ತಾರೆ.

ತಮ್ಮ ಗ್ರಾಮಕ್ಕೆ ಒಮ್ಮೆ ಸುದೀಪ್ ಭೇಟಿ ನೀಡಬೇಕೆಂಬುದು ಅಭಿಮಾನಿಗಳ ಅಭಿಲಾಷೆಯಾಗಿತ್ತು. ಇದನ್ನು ತಿಳಿದ ಸುದೀಪ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಕಳೆದ ಭಾನುವಾರ ದಾವಣಗೆರೆಯಲ್ಲಿ ‘ಹೆಬ್ಬುಲಿ’ ಆಡಿಯೋ ರಿಲೀಸ್ ಫಂಕ್ಷನ್ ಗೆ ಹೋಗುವ ಸಂದರ್ಭದಲ್ಲಿ ಸುದೀಪ್ ಗ್ರಾಮಕ್ಕೆ ಭೇಟಿ ನೀಡಿದ್ದರು.

ಇದರೊಂದಿಗೆ ತಮ್ಮ ಆಪ್ತ ಸಹಾಯಕರಾಗಿದ್ದವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಶಿರಾ ತಾಲ್ಲೂಕಿನ ದಂಡಿಕೆರೆಯ ಧನಂಜಯ್, ಸುದೀಪ್ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, 2011 ರಲ್ಲಿ ನಿಧನರಾಗಿದ್ದಾರೆ.

ಅವರ ಪುತ್ರಿ ಚಂದನಾಳ 7 ನೇ ವರ್ಷದ ಹುಟ್ಟುಹಬ್ಬಕ್ಕೆಂದು ಮನೆಗೆ ಬಂದ ಸುದೀಪ್, ಕೆಲ ಸಮಯ ಕಳೆದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಧನಂಜಯ್ ನಿಧನದ ನಂತರ ಅವರ ಸಹೋದರ ಪಾರ್ಥ, ಸುದೀಪ್ ಬಳಿ ಸಹಾಯಕರಾಗಿದ್ದಾರೆ.

ಧನಂಜಯ್ ಪುತ್ರಿಯ ಹುಟ್ಟುಹಬ್ಬದಲ್ಲಿ ಸುದೀಪ್ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗ್ರಾಮಕ್ಕೆ ಸುದೀಪ್ ಬಂದಿರುವ ಸುದ್ದಿ ತಿಳಿದ ಅಪಾರ ಅಭಿಮಾನಿಗಳು ಅವರನ್ನು ನೋಡಲು ಮುಗಿ ಬಿದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...