alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಗಾವಿಯಲ್ಲಿ ಸುದೀಪ್ ಅಭಿಮಾನಿಗಳ ಹೈಡ್ರಾಮಾ

sudepp-fans

ಬೆಳಗಾವಿ: ಕೆಲವು ದಿನಗಳ ಹಿಂದೆ ಪೆಟ್ರೋಲ್ ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತೆ ಹೈಡ್ರಾಮಕ್ಕೆ ಕಾರಣವಾಗಿದ್ದಾರೆ.

‘ಹೆಬ್ಬುಲಿ’ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದ ಸಂದರ್ಭದಲ್ಲಿ ಸುದೀಪ್ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ. ಕೃತಜ್ಞತೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಅವರು ಬೆಳಗಾವಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸರಗೊಂಡ ಬೆಳಗಾವಿಯ ಸುದೀಪ್ ಅಭಿಮಾನಿಗಳಾದ ಸಚಿನ್ ಮತ್ತು ಪ್ರವೀಣ್ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೆಲ ದಿನಗಳ ಬಳಿಕ ಇಬ್ಬರನ್ನೂ ಬೆಂಗಳೂರಿಗೆ ಕರೆಸಿಕೊಂಡ ಸುದೀಪ್, ಹೀಗೆಲ್ಲಾ ಮಾಡಬೇಡಿ ಎಂದು ಬುದ್ಧಿವಾದ ಹೇಳಿ, ಮತ್ತೊಮ್ಮೆ ಬೆಳಗಾವಿಗೆ ಬರುವುದಾಗಿ ಭರವಸೆ ನೀಡಿದ್ದರು.

ಸುದೀಪ್ ಮಾತು ಕೊಟ್ಟಂತೆ ನಮ್ಮೂರಿಗೆ ಬಂದಿಲ್ಲವೆಂದು ಸಚಿನ್ ಮತ್ತು ಪ್ರವೀಣ್ ಕಳೆದೆರಡು ದಿನಗಳಿಂದ ಉಪವಾಸ ಕೈಗೊಂಡಿದ್ದು, ಅಸ್ವಸ್ಥರಾಗಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸುದೀಪ್ ಅಭಿಮಾನಿಗಳ ಸಂಘದ ಮುಖಂಡರು ಬುದ್ಧಿವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...