alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಕ್ಕೆ ಮನಸೋತ ಅಭಿನಯ ಚಕ್ರವರ್ತಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಸಿನಿಮಾ ಮಾತ್ರವಲ್ಲದೇ, ಕಿರುತೆರೆಯಲ್ಲಿಯೂ ‘ಬಿಗ್ ಬಾಸ್’ ಶೋ ಹೋಸ್ಟ್ ಮಾಡುವ ಮೂಲಕ ಅವರು ಮನೆ ಮಾತಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಸುದೀಪ್ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಕಿರಿಯವರಿಂದ ಹಿಡಿದು ಹಿರಿಯರವರೆಗೂ ಅವರು ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿದ್ದಾರೆ. ವಿಶೇಷ ಅಭಿಮಾನಿಯೊಬ್ಬರ ಅಭಿಮಾನಕ್ಕೆ ಮನಸೋತಿರುವ ಸುದೀಪ್, ಅವರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. 82 ವರ್ಷದ ಹಿರಿಯರಾದ ಪದ್ಮಾ ಅವರಿಗೆ ಸುದೀಪ್ ಅಂದ್ರೆ ಅಚ್ಚು ಮೆಚ್ಚು.

ಸುದೀಪ್ ಅವರು ಅಭಿನಯಿಸಿರುವ ಸಿನಿಮಾಗಳನ್ನೆಲ್ಲಾ ನೋಡಿರುವ ಪದ್ಮಾ ಅವರಿಗೆ ಸುದೀಪ್ ಅವರನ್ನೊಮ್ಮೆ ನೋಡಬೇಕೆಂಬ ಆಸೆ. ಕಣ್ಣು ಸರಿಯಾಗಿ ಕಾಣಿಸದಿದ್ದರೂ, ಸುದೀಪ್ ಅವರ ಸಿನಿಮಾ, ಶೋಗಳನ್ನು ಅವರು ನೋಡಿ ಖುಷಿಪಟ್ಟಿದ್ದಾರೆ. ಇವರ ಬಗ್ಗೆ ತಿಳಿದುಕೊಂಡ ಸುದೀಪ್, ತಾವೇ ಅವರ ಮನೆಗೆ ಹೋಗಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

‘ಖಂಡಿತವಾಗಿಯೂ ನಿಮ್ಮ ಮನೆಗೆ ಬರುತ್ತೇನೆ. ನಿಮ್ಮಂತಹವರ ಮಾತು, ಆಶೀರ್ವಾದವೇ ನನ್ನ ಸಂಪಾದನೆಯಾಗಿದೆ, ಧನ್ಯವಾದಗಳು’ ಎಂದು ಸುದೀಪ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...