alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ‘ಅಭಿನಯ ಚಕ್ರವರ್ತಿ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಕ್ಟಿಂಗ್, ವಾಯ್ಸ್, ಸ್ಟೈಲಿಶ್ ಲುಕ್ ಅಂದ್ರೆ ಅಭಿಮಾನಿಗಳಿಗೆ ಪಂಚ ಪ್ರಾಣ. ಅವರ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ. ತಮ್ಮ ಅಭಿಮಾನಿಯೊಬ್ಬರ ಅಭಿಮಾನಕ್ಕೆ ಮನಸೋತ ಕಿಚ್ಚ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಾರೆ.

ಧಾರವಾಡದ ಮಂಜುನಾಥ್ ಬೆಳಗನವರ್ ಸುದೀಪ್ ಅಭಿಮಾನಿಯಾಗಿದ್ದಾರೆ. ಅವರಿಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಆದರೆ, ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾರೆ. ಸುದೀಪ್ ಅಭಿನಯದ  ಚಿತ್ರವನ್ನ ಒಂದೂ ಬಿಡದೇ ನೋಡಿದ್ದಾರೆ.

ಸುದೀಪ್ ಅಂದ್ರೆ ಮಂಜುನಾಥ್ ಅವರಿಗೆ ಭಾರೀ ಇಷ್ಟ. ಅವರಂತೆಯೇ ಸ್ಟೈಲ್ ಮಾಡಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಇಂತಹ ಮಂಜುನಾಥ್ ಅವರಿಗೆ ಒಮ್ಮೆ ಸುದೀಪ್ ಅವರನ್ನು ನೋಡಬೇಕೆಂಬ ಆಸೆಯಾಗಿದೆ. ಹಠ ಹಿಡಿದು ಸುದೀಪ್ ಅವರನ್ನು ಭೇಟಿಮಾಡಿದ್ದಾರೆ.

ಮಂಜುನಾಥ್ ಅವರ ಬಗ್ಗೆ ತಿಳಿದುಕೊಂಡ ಸುದೀಪ್, ತಮ್ಮ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಪಾತ್ರವೊಂದನ್ನು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...