alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆ ಪ್ರಚಾರ: ಇಂತಹ ನಿರ್ಧಾರ ಕೈಗೊಂಡ್ರು ಸುದೀಪ್

ವಿಧಾನಸಭೆ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಸ್ನೇಹಿತರು, ಆತ್ಮೀಯರ ಪರವಾಗಿ ಪ್ರಚಾರ ನಡೆಸಿದ್ದಾರೆ. ಆದರೆ, ಅಭಿಮಾನಿಗಳು –ಗೆಳೆಯರ ಒತ್ತಡದ ಹಿನ್ನಲೆಯಲ್ಲಿ ಇನ್ನುಮುಂದೆ ಪ್ರಚಾರಕ್ಕೆ ತೆರಳದಿರಲು ಅವರು ತೀರ್ಮಾನಿಸಿದ್ದಾರೆ.

ಸುಮಾರು ವರ್ಷಗಳ ಗೆಳೆಯರ ಸಲುವಾಗಿ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಅವರು ಒಂದಲ್ಲ ಒಂದು ರೀತಿ ನನ್ನ ಕಠಿಣ ಸಮಯದಲ್ಲಿ ಜೊತೆಯಾಗಿದ್ದವರು. ಅದು ಸಣ್ಣದು ಅಥವಾ ದೊಡ್ಡದು ಎಂಬುದು ವಿಷಯವಲ್ಲ, ಅಂದು ಅವರು ಜೊತೆಯಾಗಿದ್ದರು. ಈಗ ಅವರಿಗಾಗಿ ನಾನು ಸಣ್ಣ ಬೆಂಬಲ ನೀಡಿದ್ದೇನೆ. ನಾನು ಅವರಿಗಾಗಿ ಅಷ್ಟು ಮಾಡಬಹುದು ಎಂದು ಸುದೀಪ್ ಹೇಳಿದ್ದಾರೆ.

ಅಭಿಮಾನಿಗಳು, ಗೆಳೆಯರ ಸಲುವಾಗಿ ಇನ್ನುಮುಂದೆ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ನನ್ನ ಉಪಸ್ಥಿತಿಯಿಂದ ಫಲಿತಾಂಶ ಬದಲಾಗುತ್ತದೆ ಎಂದು ನಾನು ಭಾವಿಸವುದಿಲ್ಲ. ನಾನೊಬ್ಬ ಕಲಾವಿದ. ನನ್ನ ಪಯಣದಲ್ಲಿ ಜೊತೆಗಿರುವ ಗೆಳೆಯರು, ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...