alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಮಿಂಚಿದ್ದಾರೆ. ಸಿನಿಮಾ ಕ್ಷೇತ್ರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅವರು ತೊಡಗಿಕೊಂಡಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇದನ್ನವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ.

ಸುದೀಪ್ ಸಾಮಾಜಿಕ ಕಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವಶ್ಯವಿದ್ದಾಗ ಭೇಟಿ ಮಾಡುತ್ತಾರೆ. ಸುದೀಪ್ ಅವರ ಮಾದರಿ ನಡೆ ಮತ್ತೆ ಬಹಿರಂಗವಾಗಿದೆ.

‘ಬಿಗ್ ಬಾಸ್’ ಸೀಸನ್ 5 ರನ್ನರ್ ಅಪ್ ದಿವಾಕರ್ ಅವರಿಗೆ ಸುದೀಪ್ ಆರ್ಥಿಕ ನೆರವು ನೀಡಿದ್ದಾರೆ. ಹಿಂದಿನ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ದ ಕೀರ್ತಿ ಅವರಿಗೆ ಸುದೀಪ್ ನೆರವು ನೀಡಿದ್ದರು. ಮೊದಲ ಬಹುಮಾನ ಪಡೆದಷ್ಟು ಖುಷಿಗಿಂತ ಹೆಚ್ಚು ಸಂತಸವಾಗಿದೆ ಎಂದು ಕೀರ್ತಿ ಹೇಳಿದ್ದರು.

ಈಗ ದಿವಾಕರ್ ಅವರಿಗೂ ಸುದೀಪ್ ಅವರು ನೆರವು ನೀಡಿದ್ದಾರೆ. ದಿವಾಕರ್ ಅವರೇ ಇದನ್ನು ಹೇಳಿಕೊಂಡಿದ್ದಾರೆ. ತಮ್ಮನ್ನು ಪ್ರೀತಿಯಿಂದ ಕಂಡು ಸುದೀಪ್ ದೊಡ್ಡ ಮೊತ್ತವನ್ನು ನೀಡಿದ್ದಾರೆ. ಸಿನಿಮಾದಲ್ಲಿಯೂ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅವರು ನಮಗೆ ದೇವರಿದ್ದಂತೆ ಎಂದು ದಿವಾಕರ್ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...