alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಕಾಶಿಯಲ್ಲೂ ಕಮಾಲ್ ಮಾಡಿದ ಕಿಚ್ಚ ಬಾಯ್ಸ್

kicha-23

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡ ಭರ್ಜರಿ ಜಯ ಗಳಿಸಿದೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಸುದೀಪ್ ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆಡುವ ಅಪೂರ್ವ ಅವಕಾಶ ಒದಗಿ ಬಂದಿತ್ತು.

ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದಕ್ಕೆ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಟೂರ್ನಿಯಲ್ಲಿ ಭಾಗಿಯಾಗಿದ್ದು ತಮ್ಮ ಸೌಭಾಗ್ಯವೆಂದು ಹೇಳಿಕೊಂಡಿದ್ದಾರೆ.

ಸುದೀಪ್ ಟೀಂ ಟೂರ್ನಿಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೇ, ಫೈನಲ್ ನಲ್ಲಿಯೂ ಜಯಗಳಿಸಿದೆ. ವಿಶ್ವದ ಸ್ಟಾರ್ ಕ್ರಿಕೆಟಿಗರ ಸಹಿ ಇರುವ ಬ್ಯಾಟ್ ಗಳನ್ನು ಉಡುಗೊರೆಯಾಗಿ ಪಡೆದಿದೆ.

ಇದೆಲ್ಲವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸುದೀಪ್, ಲಾರ್ಡ್ಸ್ ಮೈದಾನದಲ್ಲಿ ಆಟವಾಡಿ ಜಯಗಳಿಸಿದ್ದು, ಅಲ್ಲಿನ ಬೃಹತ್ ಎಲ್.ಇ.ಡಿ. ಪರದೆ ಮೇಲೆ ಕಾಣಿಸಿಕೊಂಡಿದ್ದು, ಶ್ರೇಷ್ಟ ಆಟಗಾರರನ್ನು ಭೇಟಿ ಮಾಡಿದ ಕ್ಷಣಗಳು ಅಮೋಘ. ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...