alex Certify
ಕನ್ನಡ ದುನಿಯಾ       Mobile App
       

Kannada Duniya

‘ಹೆಬ್ಬುಲಿ’ ಸುದೀಪ್ ಅಭಿಮಾನಿಗಳಿಗೊಂದು ಸುದ್ದಿ

sudeep-dd

ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಮೂವಿ ‘ಹೆಬ್ಬುಲಿ’ ಜೋಡಿ ಮತ್ತೊಮ್ಮೆ ಜೊತೆಯಾಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಿರ್ದೇಶಕ ಕೃಷ್ಣ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.

‘ಹೆಬ್ಬುಲಿ’ ಬಳಿಕ ಸುದೀಪ್ ‘ಜೋಗಿ’ ಪ್ರೇಮ್ ನಿರ್ದೇಶನದಲ್ಲಿ ‘ದಿ ವಿಲನ್’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಮುಗಿಸಿದ ಬಳಿಕ ಮತ್ತೊಂದು ದೊಡ್ಡ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ.

ಸುದೀಪ್ ಅವರಿಗಾಗಿ 3 ಕತೆಗಳನ್ನು ಕೃಷ್ಣ ಸಿದ್ಧಪಡಿಸಿದ್ದು, ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗಿದೆ. ಸೆಪ್ಟಂಬರ್ ನಿಂದ ಸಿನಿಮಾ ಶುರುವಾಗಲಿದ್ದು, ಅಕ್ಟೋಬರ್ ನಿಂದ ಸುದೀಪ್ ಜಾಯಿನ್ ಆಗಲಿದ್ದಾರೆ.ಈಗಾಗಲೇ ಪ್ರಾಥಮಿಕ ಹಂತದ ಕೆಲಸ ಆರಂಭವಾಗಿವೆ.

ನಿರ್ಮಾಪಕರನ್ನು ಹೊರತುಪಡಿಸಿ ‘ಹೆಬ್ಬುಲಿ’ಗೆ ಕೆಲಸ ಮಾಡಿದ್ದ ತಂಡವೇ ಈ ಹೊಸ ಚಿತ್ರಕ್ಕೂ ಕೈ ಜೋಡಿಸಿದ್ದು, ‘ಸುದೀಪ್’ ಅವರ ಹೊಸ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...