alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ

SUDEEP-BIRTHDAY

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕೋಟಿಗೊಬ್ಬ-2’ (ಟೈಟಲ್ ಫೈನಲ್ ಆಗಿಲ್ಲ) ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಇನ್ನು ಎರಡು ಹಾಡುಗಳ ಶೂಟಿಂಗ್ ಕಂಪ್ಲೀಟ್ ಆದರೆ, ರಿಲೀಸ್ ಗೆ ರೆಡಿಯಾದಂತೆಯೇ.

ಸುದೀಪ್ ಅವರೊಂದಿಗೆ ನಾಯಕಿಯಾಗಿ ನಿತ್ಯಾಮೆನನ್ ಕಾಣಿಸಿಕೊಳ್ಳುತ್ತಿದ್ದು, ಖ್ಯಾತ ನಿರ್ದೇಶಕ ಕೆ. ಎಸ್. ರವಿಕುಮಾರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಈ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ, ಚಿತ್ರೀಕರಣ ಹಂತದಲ್ಲಿರುವಾಗಲೇ, ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಚಿತ್ರದಲ್ಲಿ ವಿಲನ್ ರೋಲ್ ನಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್, ಮುಖೇಶ್ ತಿವಾರಿ, ಶರತ್ ಲೋಹಿತಾಶ್ವ, ಅವಿನಾಶ್ ಮೊದಲಾದವರು ನಟಿಸಿದ್ದಾರೆ.

ಮತ್ತೊಂದು ಸಂತಸದ ಸುದ್ದಿಯೆಂದರೆ ಈ ಚಿತ್ರದ ಆಡಿಯೋ ರಿಲೀಸ್ ಫಂಕ್ಷನ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬರಲಿದ್ದಾರೆ. ಮಾರ್ಚ್ ನಲ್ಲಿ ಆಡಿಯೋ ಲಾಂಚ್ ಮಾಡಿ, ಏಪ್ರಿಲ್ ವೇಳೆಗೆ ಚಿತ್ರ ತೆರೆಗೆ ತರಲು ಚಿತ್ರ ತಂಡ ಯೋಜಿಸಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...