alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟರ್ ಲೈವ್ ನಲ್ಲಿ ಜೀವನದ ರಹಸ್ಯ ಹೇಳಿದ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಡಂಬರದ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದು, ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವಂತೆ ಅಭಿಮಾನಿಗಳಿಗೆ ಹೇಳಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಅಭಿಮಾನಿಗಳು ಸಾಮಾಜಿಕ ಕಾರ್ಯಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಅಸಲಿಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದಿರುವ ಕಾರಣವನ್ನು ಟ್ವಿಟರ್ ಲೈವ್ ನಲ್ಲಿ ಸುದೀಪ್ ಬಿಚ್ಚಿಟ್ಟಿದ್ದಾರೆ.

ಕಳೆದ ಸಲ ಹುಟ್ಟುಹಬ್ಬ ಆಚರಣೆ ಮುಗಿಸಿ ಹೋಗುವಾಗ ಪುಟ್ಟ ಬಾಲಕಿಯೊಬ್ಬಳು ಕೆಳಗೆ ಬಿದ್ದಿದ್ದ ಕೇಕ್ ಆಯ್ದುಕೊಳ್ಳುತ್ತಿದ್ದ ದೃಶ್ಯ ಕಣ್ಣಿಗೆ ಕಂಡಿದೆ. ಹಾಗಾಗಿ, ಸುದೀಪ್ ಇನ್ನು ಮುಂದೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.

ಇದೆಲ್ಲವನ್ನು ಟ್ವಿಟರ್ ಲೈವ್ ನಲ್ಲಿ ಸುದೀಪ್ ಹೇಳಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸುದೀಪ್, ಹಿಂದಿನ ವರ್ಷದ ಘಟನೆಯಿಂದ ಇನ್ನುಮುಂದೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿ ಆ ಹಣವನ್ನು ಅನಾಥಾಶ್ರಮದ ಮಕ್ಕಳಿಗೆ ನೀಡುವಂತೆ ಹೇಳಿದ್ದಾರೆ.

ಅಲ್ಲದೇ 18 ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಕೆಲವು ಅನಾಥಾಶ್ರಮ, ಶಾಲೆಗಳನ್ನು ನಡೆಸಲು ನೆರವು ನೀಡುತ್ತಿದ್ದಾರೆ. ಇದೆಲ್ಲವನ್ನು ಹೇಳಬಾರದೆಂದುಕೊಂಡಿದ್ದೆ. ನೀವು ದುಡ್ಡಿದ್ದವರು ಸಹಾಯಮಾಡಿ, ಅಭಿಮಾನಿಗಳಿಗೆಲ್ಲಾ ನೆರವು ನೀಡಲು ಹೇಳುವುದು ಎಷ್ಟು ಸರಿ ಎಂದು ಕೆಲವರು ಹೇಳಿದ್ದರಂತೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್, ನನ್ನ ಬರ್ತಡೇ ಗೆ ಖರ್ಚು ಮಾಡುವ ಹಣವನ್ನು ಮಕ್ಕಳಿಗೆ ಕೊಡಿ ಎಂದು ಹೇಳಿದ್ದೇನೆ. ನಾನು ಯಾರಿಗೂ ನೀವು ಹೀಗೇ ಮಾಡಿ ಎಂದು ಹೇಳಿಲ್ಲ. ಅದು ಅವರ ಇಚ್ಚೆಯಾಗಿದೆ. ನಾನು ಯಾರ ಬಳಿಯೂ ಕೈ ಚಾಚಿಲ್ಲ. ಕಷ್ಟಪಟ್ಟು ಸಂಪಾದಿಸಿದ್ದರಲ್ಲಿ ಶೇ.40 -50 ರಷ್ಟು ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದೇನೆ. ಜೀವನದಲ್ಲಿ ನಿಮ್ಮ ಪ್ರೀತಿಯೇ ನನಗೆ ಮುಖ್ಯ. ಅಲೆಕ್ಸಾಂಡರ್ ಜಗತ್ತನ್ನೇ ಗೆದ್ದರೂ ಬರಿಗೈಯಲ್ಲಿ ಹೋಗಿದ್ದು ನಮಗೆಲ್ಲರಿಗೂ ತಿಳಿದಿದೆ. ನಾನು ಜೀವ ಇರುವವರೆಗೆ ನಿಮ್ಮೊಂದಿಗೆ ಇರಬೇಕೆಂದು ಬಯಸುತ್ತೇನೆ.

ಜನರಿಗೆ ಕೈಲಾದ ಸಹಾಯ ಮಾಡುತ್ತೇನೆ. ಬರ್ತಡೇ ಬೇಡವೆಂದು ಹೇಳಿದ್ದೇನೆ. ತಿಂಗಳಲ್ಲಿ 1 ಭಾನುವಾರ ನಿಮ್ಮನ್ನು ಭೇಟಿಯಾಗುತ್ತೇನೆ…. ಹೀಗೆ ಸುದೀಪ್ ಅವರು ಟ್ವಿಟರ್ ಲೈವ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...