alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೇದಿತಾಗೆ ಸುದೀಪ್ ಮೆಚ್ಚುಗೆ, ಕಾರಣ ಗೊತ್ತಾ…?

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಯಾರು ಹೋಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವಾರ ರಿಯಾಜ್, ಚಂದನ್, ಕಾರ್ತಿಕ್, ಶ್ರುತಿ, ಸಮೀರ್, ನಿವೇದಿತಾ ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿತ್ತು.

ಶನಿವಾರದ ಸಂಚಿಕೆಯಲ್ಲಿ ‘ವಾರದ ಕತೆ ಕಿಚ್ಚನ ಜೊತೆ’ ಸಖತ್ತಾಗಿತ್ತು. ಈ ವಾರ ರಿಯಾಜ್ ಮನೆಯಿಂದ ಹೊರಗೆ ಬಂದಿದ್ದಾರೆ. ಮೊದಲಿಗೆ ಮನೆಯೊಳಗೆ ಸದಸ್ಯರ ನಡುವೆ ವಿವಿಧ ವಿಷಯಗಳ ಕುರಿತಾಗಿ ಚರ್ಚೆ ನಡೆದಿದೆ. ಸಮೀರ್ ಅವರು, ನಿಮಗೆ ಜಬರ್ದಸ್ತ್ ಹೆಂಡ್ತಿ ಸಿಗ್ತಾಳೆ ಎಂದು ಚಂದನ್ ಗೆ ಹೇಳಿದ್ದಾರೆ. ಕಾರ್ತಿಕ್ ಮನೆಯೊಳಗೆ ಯಾರೋ ಓಡಾಡಿದಂತಾಯ್ತು ಎಂದು ನಿವೇದಿತಾಗೆ ಭಯಪಡಿಸಿದ್ದಾರೆ. ಇದೇ ವಿಚಾರವಾಗಿ ನಡೆದ ಚರ್ಚೆಯಲ್ಲಿ ಅನುಪಮಾ ಜೊತೆಯಾಗಿದ್ದಾರೆ. ರಿಯಾಜ್ ಹಾಡಿಗೆ ಈಜುಕೊಳದಲ್ಲಿ ಚಂದನ್ ಸಂಗೀತ ನೀಡಿದ್ದು, ವಿಶೇಷವಾಗಿತ್ತು.

ಇನ್ನು ‘ಬಿಗ್ ಬಾಸ್’ ವೇದಿಕೆಯಲ್ಲಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡ ಸುದೀಪ್, ಮನೆಯೊಳಗಿನ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಈ ವಾರ ಸದಸ್ಯರು ಹೇಗೆಲ್ಲಾ ಪ್ರದರ್ಶನ ನೀಡಿದ್ದಾರೆ. ಏನೆಲ್ಲಾ ಮಾಡಿದ್ದಾರೆ ಎಂಬುದರ ಕುರಿತಾಗಿ ಮಾತನಾಡಿ ಪಂಚಾಯಿತಿ ನಡೆಸಿದ್ದಾರೆ.

ಮನೆಯೊಳಗೆ ಸದಸ್ಯರ ಕುಟುಂಬದವರು ಬಂದಿದ್ದು, ಸದಸ್ಯರು ಬೇರೆ ಸದಸ್ಯರ ರೀತಿ ನಟಿಸಿದ ಪ್ರಸಂಗಗಳ ಕುರಿತಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದಸ್ಯರು ಬಂದಾಗ ಅತಿ ಹೆಚ್ಚು ಹೊತ್ತು ಮಡಿಕೆಯನ್ನು ಬ್ಯಾಲೆನ್ಸ್ ಮಾಡಿ ಹಿಡಿದಿದ್ದ ನಿವೇದಿತಾ ಅವರಿಗೆ ಹ್ಯಾಟ್ಸಾಫ್ ಹೇಳಿದ್ದಾರೆ. ನೀವು ಆಯ್ಕೆಯಾದ ಜೊತೆಗಾರರಿಗೆ ಇವರೇ ಸಿಗಬೇಕಿತ್ತಾ ಎನಿಸುತ್ತದೆ. ಅಷ್ಟೊತ್ತು ಇಡ್ಕೊತಿರಾ ಎಂದು ಯಾರೂ ಅಂದ್ಕೊಂಡಿರಲಿಲ್ಲ. ನಿಮಗೆ ಕೈಮುಗಿದು ಹೇಳಬೇಕು. ಟೈಮ್ ಮುಗಿದಿದೇ ಎಂದು ಬಿಗ್ ಬಾಸ್ ಹೇಳುವವರೆಗೂ ಮಡಿಕೆ ಬ್ಯಾಲೆನ್ಸ್ ಮಾಡಿದ್ರಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಸಮೀರ್ ಪತ್ನಿಯೊಂದಿಗೆ ಮದುವೆಯಾಗಿದ್ದು, ತಾಯಿ ಬಂದಾಗ ನಿವೇದಿತಾ ಸೈಲೆಂಟ್ ಆಗಿದ್ದು, ಕಾರ್ತಿಕ್ ಅತ್ತಿದ್ದು, ದಿವಾಕರ್, ರಿಯಾಜ್ ಅವರ ಕುಟುಂಬದವರು ಬಂದಾಗ ಹೇಗೆಲ್ಲಾ ಇತ್ತು ಎಂಬುದರ ಕುರಿತಾಗಿ ಪ್ರಸ್ತಾಪಿಸಿದ್ದಾರೆ.

ಮನೆಯೊಳಗೆ ರಿಯಾಜ್, ದಿವಾಕರ್, ನಿವೇದಿತಾ ಗೆಲ್ಲಲಿ ಎಂದು ಸಮೀರ್ ಆಶೀರ್ವಾದ ಮಾಡಿದ್ದು ಸತ್ಯವೋ ಸುಳ್ಳೋ ಎಂಬುದರ ಬಗ್ಗೆ ಸುದೀಪ್ ಕೇಳಿದಾಗ, ನಾನು ಗೆಲ್ಲಬೇಕು ಎಂದು ಸಮೀರ್ ಹೇಳಿದ್ದು, ತಮಾಷೆಯಾಗಿತ್ತಾದರೂ, ಅಷ್ಟೇ ಗಂಭೀರವಾದ ಚರ್ಚೆ ನಡೆಯಿತು.

ಎಲ್ಲರ ಕುಟುಂಬದವರು ಬಂದರೂ, ಶ್ರುತಿ ಅವರ ಕುಟುಂಬದವರು ಬಾರದಿರುವ ಬಗ್ಗೆ ಮಾತನಾಡಿದಾಗ, ಶ್ರುತಿ ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಲರ್ ಆಫ್ ದಿ ವೀಕ್’ನಲ್ಲಿ ಮಾತನಾಡಿದ ಬೆಂಗಳೂರಿನ ಶ್ವೇತಾ ಅವರು, ಮನೆಯಲ್ಲಿ ಕ್ಯಾಪ್ಟನ್ ಆಗದ ದಿವಾಕರ್ ಚೀಟಿ ಕೊಡುವಂತೆ ಕೇಳಿದರೂ ಶ್ರುತಿ ಕೊಡದ ಬಗ್ಗೆ ಪ್ರಶ್ನಿಸಿದ್ದು, ಇದಕ್ಕೆ ಶ್ರುತಿ ಪ್ರತಿಕ್ರಿಯೆ ನೀಡಿದ್ದಾರೆ. ನಾಮಿನೇಟ್ ಆಗಿದ್ದ ಸದಸ್ಯರೆಲ್ಲಾ ಸೇಫ್ ಆಗಿ ಕೊನೆಯಲ್ಲಿ ಸಮೀರ್ ಮತ್ತು ರಿಯಾಜ್ ಅವರು ಉಳಿದುಕೊಂಡಿದ್ದಾರೆ. ಅವರಲ್ಲಿ ರಿಯಾಜ್ ಮನೆಯಿಂದ ಹೊರಗೆ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...