alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಸುದೀಪ್ ‘ಹೆಬ್ಬುಲಿ’ಯ ಇಂಟ್ರೆಸ್ಟಿಂಗ್ ಸುದ್ದಿ

gme-dd

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಇದೇ ವಾರ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಈಗಾಗಲೇ ‘ಹೆಬ್ಬುಲಿ’ ಮೇನಿಯಾ ಶುರುವಾಗಿದೆ.

ಇದೇ ಸಂದರ್ಭದಲ್ಲಿ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಕಿಚ್ಚ ಸುದೀಪ್ ಅಭಿಮಾನಿಗಳು ‘ಹೆಬ್ಬುಲಿ’ 3 ಡಿ ಮೊಬೈಲ್ ಗೇಮ್ ಆಪ್ ಬಿಡುಗಡೆ ಮಾಡಿದ್ದಾರೆ.

‘ಟೀಮ್ 13’ ಹೆಸರಿನ ಸುದೀಪ್ ಅಭಿಮಾನಿಗಳ ತಂಡದ ಸಂತೋಷ್ ನೇತೃತ್ವದಲ್ಲಿ 60 ದಿನಗಳ ಕಾಲ ಶ್ರಮ ವಹಿಸಿ, ಮೊಬೈಲ್ ಗೇಮ್ ರೂಪಿಸಿದ್ದು, ಅಂಡ್ರಾಯಿಡ್ ಫೋನ್ ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಕಮಾಂಡೋ ಸುದೀಪ್ ಎದುರಾಳಿಗಳನ್ನು ಹೊಡೆದುರುಳಿಸುವಂತೆ ಗೇಮ್ ರಚಿಸಿದ್ದು, 2 ಹಂತಗಳಲ್ಲಿ ಆಟ ಒಳಗೊಂಡಿದೆ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವಂತೆ ರೂಪಿಸಲಾಗಿದೆ.

ಟೀಮ್ 13 ಮಾಡಿರುವ ಈ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ. ಒಟ್ಟಾರೆ, ‘ಹೆಬ್ಬುಲಿ’ ಕ್ರೇಜ್ ಎಲ್ಲಾ ಕಡೆ ಸೃಷ್ಠಿಯಾಗಿದ್ದು, ಚಿತ್ರ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...