alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಗೆ ಸುದೀಪ್ ಚಾಲನೆ

ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಸುದೀಪ್, ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿರೋ ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡೋದು ಈ ಟೂರ್ನಿಯ ಉದ್ದೇಶ.

ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯಲ್ಲಿ ಸುದೀಪ್ ಸ್ಯಾಂಡಲ್ವುಡ್ ತಂಡದ ನಾಯಕರಾಗಿದ್ದರು. ಇದೀಗ ಕೆಸಿಸಿಯಲ್ಲಿ ನಿರ್ಮಾಪಕರು, ನಿರ್ದೇಶಕರು, ಎಡಿಟರ್ ಗಳು, ಗೀತ ರಚನೆಕಾರರು ಎಲ್ಲರಿಗೂ ಆಡುವ ಅವಕಾಶ ಸಿಗಲಿದೆ ಅಂತಾ ಕಿಚ್ಚ ತಿಳಿಸಿದ್ದಾರೆ.

ಇನ್ನು ನಟಿಯರು ಕೂಡ ತಂಡಗಳನ್ನು ಬೆಂಬಲಿಸಬಹುದು, ಕಮೆಂಟೇಟರ್ ಆಗಲು ಸಹ ಅವರಿಗೆ ಅವಕಾಶವಿದೆಯಂತೆ. ಕನ್ನಡ ಚಲನಚಿತ್ರ ಕಪ್ ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಟಿ10 ಫಾರ್ಮ್ಯಾಟ್ ನ ತಲಾ ಹತ್ತು ಓವರ್ ಗಳ ಪಂದ್ಯಗಳಿರುತ್ತವೆ.

ಹಾಗಾಗಿ ಎರಡು ದಿನಗಳ ಟೂರ್ನಿಯಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಬಹುದು ಅನ್ನೋದು ಸುದೀಪ್ ಲೆಕ್ಕಾಚಾರ. ಈ ವರ್ಷ ಸಹ ಏಪ್ರಿಲ್ ನಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಸರಣಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...