alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆ ಮೊತ್ತಕ್ಕೆ ಸೇಲಾಯ್ತು ಸುದೀಪ್ ‘ಹೆಬ್ಬುಲಿ’ ಡಬ್ಬಿಂಗ್ ರೈಟ್ಸ್

hebuli

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಮೊದಲ ನೋಟದಲ್ಲೇ ಫೈರಿಂಗ್ ಲುಕ್ ನೀಡಿರುವ ಸುದೀಪ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ. ಈ ಚಿತ್ರದ ಮತ್ತೊಂದು ಮಾಹಿತಿ ಇಲ್ಲಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಈಗಾಗಲೇ, ಸುದೀಪ್ ನಾರ್ತ್ ಇಂಡಿಯಾ ಮತ್ತು ಸೌತ್ ಇಂಡಿಯಾದಲ್ಲಿ ಚಿರಪರಿಚಿತ ನಟರಾಗಿದ್ದು, ಅವರ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ನಿರ್ಮಾಣವಾಗುತ್ತಿದೆ. ‘ಗಜಕೇಸರಿ’ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಹೆಬ್ಬುಲಿ’ ಫಸ್ಟ್ ಲುಕ್ ನಲ್ಲೇ ಕಮಾಲ್ ಮಾಡಿದ್ದು, ಶೂಟಿಂಗ್ ಹಂತದಲ್ಲಿರುವಾಗಲೇ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

‘ಹೆಬ್ಬುಲಿ’ ಕತೆ ಕೇಳಿ ಮತ್ತು ಮೇಕಿಂಗ್ ಕ್ವಾಲಿಟಿ ನೋಡಿ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಅನ್ನು ದುಬಾರಿ ಮೊತ್ತ ನೀಡಿ ಖರೀದಿಸಲಾಗಿದೆ. ಬರೋಬ್ಬರಿ 2.12 ಕೋಟಿ ರೂಪಾಯಿಗೆ ‘ಹೆಬ್ಬುಲಿ’ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ನೀಡಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...