alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೈಲ್ವಾನ್’ ಸುದೀಪ್ ಗೆ ನಾಯಕಿ ಯಾರು ಗೊತ್ತಾ…?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರಕ್ಕಾಗಿ ಭಾರೀ ತಯಾರಿ ನಡೆಸಲಾಗ್ತಿದೆ. ಸುದೀಪ್, ಈ ಚಿತ್ರದಲ್ಲಿ ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ದೇಹವನ್ನು ದಂಡಿಸಿದ್ದಾರೆ. ಸಾಕಷ್ಟು ತರಬೇತಿಯನ್ನು ಕೂಡ ಪಡೆದಿದ್ದಾರೆ.

‘ಹೆಬ್ಬುಲಿ’ ಬಳಿಕ ಕೃಷ್ಣ ನಿರ್ದೇಶನಲ್ಲಿ ಸುದೀಪ್ ‘ಪೈಲ್ವಾನ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಆರಂಭದಿಂದಲೂ ಚಿತ್ರದ ಕುರಿತಾಗಿ ಭಾರೀ ಕುತೂಲ ಮೂಡಿದೆ. ಕಬೀರ್ ದುಹಾನ್ ಸಿಂಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ನಾಯಕಿಯಾಗಿ ಮುಂಬೈ ಬೆಡಗಿ ಆಕಾಂಕ್ಷಾ ಸಿಂಗ್ ಆಯ್ಕೆಯಾಗಿದ್ದಾರೆ.

ಬಾಲಿವುಡ್ ಚಿತ್ರ ‘ಬದ್ರಿನಾಥ್ ಕಿ ದುಲನ್ಹಿಯಾ’ ಹಾಗೂ ಹಲವು ಧಾರಾವಾಹಿಗಳಲ್ಲಿ ಆಕಾಂಕ್ಷಾ ಅಭಿನಯಿಸಿದ್ದಾರೆ.

ತೆಲುಗಿನಲ್ಲಿ ಅವರು 2 ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಸುದೀಪ್ ಅವರ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಶೀಘ್ರದಲ್ಲೇ ‘ಪೈಲ್ವಾನ್’ ಚಿತ್ರೀಕರಣ ಶುರುವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...