alex Certify
ಕನ್ನಡ ದುನಿಯಾ       Mobile App
       

Kannada Duniya

ಸುಚಿತ್ರಾ ಕುರಿತು ಧನುಷ್ ಸಹೋದರಿ ಹೇಳಿದ್ದೇನು..?

viamala-dhanush-mainಗಾಯಕಿ ಹಾಗೂ ಖ್ಯಾತ ನಿರೂಪಕಿ ಸುಚಿತ್ರಾ ಕಾರ್ತಿಕ್ ರ ಟ್ವಿಟ್ಟರ್ ಖಾತೆಯಲ್ಲಿ ಖ್ಯಾತ ನಟ-ನಟಿಯರ ಖಾಸಗಿ ಫೋಟೋಗಳು ಬಹಿರಂಗಗೊಂಡ ಬಳಿಕ ತಮಿಳು ಚಿತ್ರರಂಗದಲ್ಲಿ ಬಿರುಗಾಳಿ ಎದ್ದಿದೆ. ಈ ಕುರಿತು ನಟ ಧನುಷ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಅವರ ಸಹೋದರಿ ವಿಮಲಾ ಗೀತಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈಗ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ವಿಮಲಾ ಗೀತಾ, ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ನಕಲಿ ಫೋಟೋ ಹಾಗೂ ವಿಡಿಯೋಗಳನ್ನು ಹಾಕುವ ಮೂಲಕ ಮತ್ತೊಬ್ಬರ ತೇಜೋವಧೆ ಮಾಡುವ ಪ್ರಯತ್ನಗಳು ನಡೆದಿವೆ ಎಂದಿದ್ದಾರೆ.

ಕೆಲವರು ದ್ವೇಷ ಸಾಧಿಸಲು ಇಂತಹ ಪ್ರಯತ್ನಕ್ಕಿಳಿದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾವುಗಳು ರಾತ್ರೋರಾತ್ರಿ ಪ್ರಸಿದ್ದಿ ಹಾಗೂ ಶ್ರೀಮಂತಿಕೆಯನ್ನು ಪಡೆದಿಲ್ಲ. ನನ್ನ ಸಹೋದರರು ಹಲವು ವರ್ಷಗಳ ಕಾಲ ಶ್ರಮಪಟ್ಟು ಇಂದು ಈ ಸ್ಥಾನಕ್ಕೇರಿದ್ದಾರೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಕುಟುಂಬಕ್ಕೆ ನೋವು ತಂದಿದೆ ಎಂದಿದ್ದಾರೆ.

ಆದರೆ ನಟ ಧನುಷ್ ಮತ್ತವರ ಪತ್ನಿ ಐಶ್ವರ್ಯಾ ಮಾತ್ರ ಸುಚಿತ್ರಾ ಟ್ವೀಟ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಸದ್ಯ ಧನುಷ್ ‘ಪವರ್ ಪಾಂಡಿ’ ಹಾಗೂ ಪತ್ನಿಯ ಸಹೋದರಿ ಸೌಂದರ್ಯ ನಿರ್ದೇಶನದ ‘ವಿಐಪಿ 2’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ವಿಐಪಿ 2’ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟಿ ಕಾಜೋಲ್, ಧನುಷ್ ಗೆ ನಾಯಕಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...