alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅದ್ಭುತ ದ್ವೀಪಕ್ಕೆ ಮನಸೋತಿದೆ ಬಾಲಿವುಡ್

ವಿಶ್ವದಲ್ಲಿ ಅನೇಕ ಸುಂದರ ಪ್ರವಾಸಿ ಸ್ಥಳಗಳಿವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಸುಂದರ ಸ್ಥಳಗಳು ನಮ್ಮ ದೇಶದಲ್ಲೂ ಇದೆ. ಆದ್ರೆ ಬಾಲಿವುಡ್ ಸ್ಟಾರ್ ವಿದೇಶದಲ್ಲಿರುವ ಆ ದ್ವೀಪಕ್ಕೆ ಮನಸೋತಿದ್ದಾರೆ. ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಮುಂಬರುವ ಚಿತ್ರ ಭಾರತ್ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಪ್ರದೇಶದ ಬಗ್ಗೆ ನಾವು ಹೇಳ್ತಿದ್ದೇವೆ.

ಯಸ್, ಬಾಲಿವುಡ್ ಸ್ಟಾರ್ಸ್ ಮನಸೋತಿರುವ ಸುಂದರ ಸ್ಥಳ ಮಾಲ್ಟಾ. ಉತ್ತರ ಆಫ್ರಿಕಾದಲ್ಲಿರುವ ಸಣ್ಣ ದ್ವೀಪ ಮಾಲ್ಟಾ. ಸಲ್ಮಾನ್ ತಾಯಿ ಸಲ್ಮಾ ಹಾಗೂ ಸಹೋದರಿ ಜೊತೆ ಈ ಸ್ಥಳದಲ್ಲಿ ಸುತ್ತಾಡಿ, ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಕತ್ರಿನಾ  ಕೈಫ್ ಸಹ ಮಾಲ್ಟಾದಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ.

ಮಾಲ್ಟಾ ಬೀಚ್ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಪ್ರವಾಸಿಗರು ಮಾಲ್ಟಾ ಬೀಚ್ ನೋಡ್ತಿದ್ದಂತೆ ಒತ್ತಡ ಮರೆದು ರಿಲ್ಯಾಕ್ಸ್ ಆಗೋದು ನಿಶ್ಚಿತ. ಗೋಲ್ಡನ್ ಬೇ ಬೀಚಿನ ವಾತಾವರಣ ಹಾಗೂ ಮೋಜುಭರಿತ ಜಲ ಕ್ರೀಡೆಗಳು ಪ್ರವಾಸವನ್ನು ಸ್ಮರಣೀಯವಾಗಿಸುತ್ತದೆ. ಇಲ್ಲಿಗೆ ಒಮ್ಮೆ ಬಂದವರು ಮತ್ತೊಮ್ಮೆ ಬರುವಷ್ಟು ರಮಣೀಯ ತಾಣ ಇದಾಗಿದೆ.

ಮಾಲ್ಟಾದ ಈ ನಗರದ ನೀರು ಸ್ಫಟಿಕದಂತೆ ಹೊಳಪಾಗಿದೆ. ಇಂತಹ ಸುಂದರ ನೋಟ ನಿಮಗೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಮಾಲ್ಟಾದ ಸವಿನೆನಪಿಗಾಗಿ ಟೂರಿಸ್ಟಗಳ ಕ್ಯಾಮೆರಾಗಳಲ್ಲಿ ಇಲ್ಲಿನ ಸುಂದರ ದೃಶ್ಯಗಳು ಸೆರೆಯಾಗುತ್ತವೆ.

ಕಡಲ ತೀರಗಳ ಹೊರತಾಗಿ ಹಳೆಯ ಮತ್ತು ಪುರಾತನ ಕಟ್ಟಡಗಳು  ನಗರದ ಶೋಭೆ ಹೆಚ್ಚಿಸಿವೆ. ವಿವಿಧ ದೇಶಗಳ ಐತಿಹಾಸಿಕ ಕಟ್ಟಡಗಳನ್ನು ನೋಡ ಬಯಸುವವರಿಗೆ  ಈ ನಗರ  ಸೂಕ್ತ. ಇಲ್ಲಿನ ಸುಂದರ ಮತ್ತು ಹಳೆಯ ಕಟ್ಟಡಗಳು ಒಂದಕ್ಕಿಂತ ಇನ್ನೊಂದು ಚೆನ್ನಾಗಿದ್ದು, ಉತ್ತರ ಆಫ್ರಿಕಾದ ಇತಿಹಾಸ ನೆನಪಿಸುತ್ತದೆ.

ಮಾಲ್ಟಾ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದ್ದು, ವರ್ಷವೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಮಾಲ್ಟಾದಲ್ಲಿ ಮ್ಯೂಸಿಯಂ, ಆಹಾರ, ಆರೋಗ್ಯ ಪ್ರವಾಸೋದ್ಯಮ, ನೈಸರ್ಗಿಕ ಸೌಂದರ್ಯ, ಬೋಟಿಂಗ್ ಮತ್ತು ಶಾಪಿಂಗ್ ಮಜಾ ಅನುಭವಿಸಬಹುದು. ಉಳಿದಂತೆ ಗಾಂತಿಜಾ ದೇವಾಲಯ, ನವಶಿಲಾಯುಗದ ದೇವಾಲಯ, ಮಾಲ್ಟಾ ನ ವೀನಸ್  ದೇವಸ್ಥಾನವು ಇಲ್ಲಿನ ಪ್ರವಾಸಿ ಆಕರ್ಷಣೆ .

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...