alex Certify
ಕನ್ನಡ ದುನಿಯಾ       Mobile App
       

Kannada Duniya

18 ವರ್ಷದ ಬಳಿಕ ಬಹಿರಂಗವಾಯ್ತು ಈ ನಟನ ರಹಸ್ಯ

america-15-1

ಐಶ್ವರ್ಯ ರೈ ಬಚ್ಚನ್ ಅಭಿನಯದ ಚಿತ್ರ ತಾಲ್ ಬಿಡುಗಡೆಯಾಗಿ 18 ವರ್ಷ ಕಳೆದಿದೆ. ಆಗಸ್ಟ್ 13ರಂದು ಚಿತ್ರ ಬಿಡುಗಡೆಯಾಗಿತ್ತು. ಈಗ್ಲೂ ಚಿತ್ರದ ಹಾಡುಗಳನ್ನು ಕೆಲವರು ಗುನುಗ್ತಾರೆ. ಆ ಸಮಯದಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಚಿತ್ರ ತಾಲ್. ಈಗ ಈ ಚಿತ್ರದ ನೆನಪುಗಳನ್ನು ನಿರ್ಮಾಪಕ ಸುಭಾಷ್ ಘಾಯ್ ಹಂಚಿಕೊಂಡಿದ್ದಾರೆ.

ನೀವಂದುಕೊಂಡಂತೆ ನಟ ಶಾಹಿದ್ ಕಪೂರ್ ಗೆ ಇಷ್ಕ್ ವಿಷ್ಕ್ ಬಾಲಿವುಡ್ ನ ಮೊದಲ ಚಿತ್ರವಲ್ಲ. ಇದಕ್ಕೂ ಮೊದಲು ತಾಲ್ ಚಿತ್ರದಲ್ಲಿ ಶಾಹಿದ್ ಕಾಣಿಸಿಕೊಂಡಿದ್ದರು. ತಾಲ್ ಚಿತ್ರದ ಪ್ರಸಿದ್ಧ ಹಾಡು ಕಹಿ ಆಗ ಲಗೇನಲ್ಲಿ ಶಾಹಿದ್ ಹೆಜ್ಜೆ ಹಾಕಿದ್ದ. ಶಿಮಾಕ್ ದಾವರ್ ನೃತ್ಯ ತಂಡದ ಸದಸ್ಯರಾಗಿದ್ದ ಶಾಹಿದ್ ಹಾಡಿನಲ್ಲಿ ಐಶ್ ಗೆ ಬಿಳಿ ಬಟ್ಟೆಯನ್ನು ಸುತ್ತುತ್ತಾರೆ.

ನನಗೆ ಸುಂದರವಾದ ಒಬ್ಬ ಹುಡುಗ ಬೇಕಾಗಿತ್ತು. ಹಾಗಾಗಿ ಶಾಹಿದ್ ಆಯ್ಕೆ ಮಾಡಿಕೊಂಡೆ. ಆದ್ರೆ ಆತ ಪಂಕಜ್ ಕಪೂರ್ ಮಗ ಎಂಬುದು ಗೊತ್ತಿರಲಿಲ್ಲ. ಜೊತೆಗೆ ಇಷ್ಟು ದೊಡ್ಡ ಸ್ಟಾರ್ ಆಗ್ತಾನೆಂದು ಊಹಿಸಿರಲಿಲ್ಲ ಎಂದಿದ್ದಾರೆ ಸುಭಾಷ್ ಘಾಯ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...