alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಿರ್ಮಾಪಕನ ವಿರುದ್ದ ಕೇಳಿ ಬಂತು ಲೈಂಗಿಕ ಕಿರುಕುಳದ ಆರೋಪ

ದಿನದಿಂದ ದಿನಕ್ಕೆ ಮೀಟೂ ಅಭಿಯಾನದ ಸರಪಳಿ ಹೆಚ್ಚಾಗುತ್ತಾ ಸಾಗಿದ್ದು, ಇದಕ್ಕೀಗ ಬಾಲಿವುಡ್ ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಹೆಸರು ಸೇರಿದೆ. ಆದರೆ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಸುಭಾಷ್, ಮಾನನಷ್ಟ ಮೊತ್ತ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಅನಾಮಿಕ‌ ಟ್ವೀಟರ್ ಖಾತೆಯಿಂದ ಘಾಯ್ ವಿರುದ್ಧ ಆರೋಪ ಕೇಳಿಬಂದಿತ್ತು. ಸಾಹಿತ್ಯ ಅಥವಾ ಮಾಧ್ಯಮ ಕ್ಷೇತ್ರದಲ್ಲಿರುವ ಮಹಿಳೆಯೊಬ್ಬರಿಗೆ ಘಾಯ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೀಟೂ ಹ್ಯಾಷ್ ಟ್ಯಾಗ್ ನೊಂದಿಗೆ ಆರೋಪಿಸಲಾಗಿತ್ತು.

ಸುಭಾಷ್ ಅವರೊಂದಿಗೆ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾಗ, ಅನಾವಶ್ಯಕವಾಗಿ ಹೆಚ್ಚು‌ ಸಲುಗೆ ಬೆಳಸಿಕೊಂಡರು. ಕೆಲವೊಮ್ಮೆ ಚಿತ್ರದ ಸ್ಕ್ರಿಪ್ಟ್ ಗೆಂದು ಮನೆಗೆ ಕರೆದು, ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸಿದ್ದರು ಎಂದು ಇದರಲ್ಲಿ ಆರೋಪಿಸಲಾಗಿದೆ.

ಒಮ್ಮೆ ತಡರಾತ್ರಿ ಸಂಗೀತ ಕಾರ್ಯಕ್ರಮ ಮುಗಿದಾಗ,‌ ಮನೆ ಬಿಡುವ ನೆಪದಲ್ಲಿ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ, ಮದ್ಯಪಾನ ಮಾಡಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಆದರೆ ಕೆಲಸದ ಅನಿವಾರ್ಯತೆಯಿಂದ ಎಲ್ಲವನ್ನು ಮಹಿಳೆ ಸಹಿಸಿಕೊಂಡಿದ್ದರು ಎಂದು ಟ್ವೀಟ್ ಮಾಡಲಾಗಿದೆ.

ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕಿಯಿಸಿರುವ 73 ವರ್ಷದ ಸುಭಾಷ್, ಇತ್ತೀಚಿನ ದಿನದಲ್ಲಿ ಒಬ್ಬರ ಮೇಲೆ ಆಧಾರರಹಿತ ಆರೋಪ ಮಾಡುವುದು ಬೇಸರ ತರಿಸಿದೆ. ಈ ರೀತಿ ಹೇಳುವ ಬದಲು, ಕಾನೂನಿನ ಪ್ರಕಾರ ನನ್ನ‌ ವಿರುದ್ಧ ದೂರು ದಾಖಲಿಸಲಿ. ಇಲ್ಲವಾದರೆ ನಾನೇ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ‌.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...