alex Certify
ಕನ್ನಡ ದುನಿಯಾ       Mobile App
       

Kannada Duniya

ಕಪೂರ್ ಗಿಂತ ಮೊದಲೇ ಈ ಸ್ಟಾರ್ ಜೊತೆ ಗುಟ್ಟಾಗಿ ಮದುವೆಯಾಗಿದ್ದ ಶ್ರೀದೇವಿ

ಬಹುಭಾಷ ನಟಿ ಶ್ರೀದೇವಿ ದುಬೈನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಅವರನ್ನು ಅಗಲಿದ್ದಾರೆ.

ಶ್ರೀದೇವಿ ಬೋನಿ ಕಪೂರ್ ಅವರಿಗೆ 2 ನೇ ಪತ್ನಿಯಾಗಿದ್ದಾರೆ. ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ಗೆ ಡೈವೋರ್ಸ್ ನೀಡಿ ಶ್ರೀದೇವಿಯನ್ನು ಮದುವೆಯಾಗಿದ್ದರು.

ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲೇ ಮಿಥುನ್ ಚಕ್ರವರ್ತಿ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು. ಮಿಥುನ್ ಚಕ್ರವರ್ತಿ ಹಾಗೂ ಶ್ರೀದೇವಿ 1980 ರಲ್ಲಿ ರಿಲೀಸ್ ಆಗಿದ್ದ ‘ಝಾಗ್ ಉಟಾ ಇನ್ಸಾನ್’ ಚಿತ್ರದಲ್ಲಿ ಅಭಿನಯಿಸಿದ್ದರು. ಇವರು ಗುಟ್ಟಾಗಿ ಮದುವೆಯಾದ ವಿಷಯವನ್ನು ಮ್ಯಾರೇಜ್ ಸರ್ಟಿಫಿಕೇಟ್ ಸಮೇತ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿತ್ತು.

ನಂತರದಲ್ಲಿ ಮಿಥುನ್ ಮದುವೆಯಾಗಿರುವ ವಿಷಯವನ್ನು ಒಪ್ಪಿಕೊಂಡಿದ್ದರು. ಮಿಥುನ್ ಅವರ ಪತ್ನಿ ಯೋಗಿತಾ ಬಾಲಿ ಅವರಿಗೆ ಈ ವಿಚಾರ ಗೊತ್ತಾದ ಬಳಿಕ ಮಿಥುನ್ ಪತ್ನಿಯನ್ನು ಸೇರಿಕೊಂಡಿದ್ದರು.

ನಂತರ ಶ್ರೀದೇವಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾಗಿದ್ದಾರೆ. 1996 ರಲ್ಲಿ ಶ್ರೀದೇವಿ ಬೋನಿ ಕಪೂರ್ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸಬೇಕೆನ್ನುವುದು ಶ್ರೀದೇವಿಯ ಮಹದಾಸೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...