alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನ ಸೆಳೆಯುತ್ತಿದೆ ಐಶ್-ಅಭಿಯ ಹೊಸ ಮನೆ ಫೋಟೋ

ಅನುಷ್ಕಾ-ವಿರಾಟ್, ಕಂಗನಾ ರನಾವತ್, ಪ್ರಿಯಾಂಕಾ ಚೋಪ್ರಾ ಹೀಗೆ ಸೆಲೆಬ್ರಿಟಿಗಳ ಸ್ವೀಟ್ ಹೋಮ್ ಫೋಟೋಗಳು ಈಗಾಗ್ಲೇ ಇಂಟರ್ನೆಟ್ ನಲ್ಲಿ ಸಾಕಷ್ಟು ಬಾರಿ ಹರಿದಾಡಿವೆ.

ಇದೀಗ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿರೋ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ರ ಅಪಾರ್ಟ್ಮೆಂಟ್ ಎಲ್ಲರ ಗಮನ ಸೆಳೆಯುತ್ತಿದೆ.

ಈ ಮನೆಯ ಬೆಲೆ ಬರೋಬ್ಬರಿ 21 ಕೋಟಿ ರೂಪಾಯಿ. 2015ರಲ್ಲೇ ಜೂನಿಯರ್ ಬಚ್ಚನ್ ದಂಪತಿ ಈ ಅಪಾರ್ಟ್ಮೆಂಟ್ ಖರೀದಿಸಿದ್ದರು. ಮನೆ 5500 ಚದರ ಅಡಿ ವಿಸ್ತಾರವಾಗಿದೆ. Talati Panthaky Associates ಇದನ್ನು ವಿನ್ಯಾಸ ಮಾಡಿದೆಯಂತೆ.

ಇದೇ ಕಾಂಪ್ಲೆಕ್ಸ್ ನಲ್ಲೇ ನಟಿ ಸೋನಂ ಕಪೂರ್ ಕೂಡ ಅಪಾರ್ಟ್ಮೆಂಟ್ ಹೊಂದಿದ್ದಾರೆ ಎನ್ನಲಾಗ್ತಿದೆ. ಅದರ ಮೌಲ್ಯ 35 ಕೋಟಿ ರೂಪಾಯಿ. ಸದ್ಯ ಐಶ್ ಹಾಗೂ ಅಭಿ ಜುಹುವಿನಲ್ಲಿರುವ ಬಿಗ್ ಬಿ ಮನೆ ಜಲ್ಸಾದಲ್ಲಿ ನೆಲೆಸಿದ್ದಾರೆ.

ವರ್ಲಿಯ ಅನ್ನೆಬೆಸೆಂಟ್ ರಸ್ತೆಯಲ್ಲಿರೋ ಸ್ಕೈಲಾರ್ಕ್ ಟವರ್ಸ್ ನ 37ನೇ ಮಹಡಿಯಲ್ಲೂ ಒಂದು ಮನೆ ಹೊಂದಿದ್ದಾರೆ. ದುಬೈ ನಲ್ಲಿ ಕೂಡ ಐಶ್ವರ್ಯಾ-ಅಭಿಷೇಕ್ ಬಂಗಲೆಯೊಂದನ್ನು ಖರೀದಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...