alex Certify
ಕನ್ನಡ ದುನಿಯಾ       Mobile App
       

Kannada Duniya

ಐಫಾದಲ್ಲಿ ಕತ್ರಿನಾಗೆ ಸರ್ಪ್ರೈಸ್ ನೀಡಿದ ಸಲ್ಮಾನ್

iifa

ನ್ಯೂಯಾರ್ಕ್ ನಲ್ಲಿ ಐಫಾ ಪ್ರಶಸ್ತಿ 2017 ಕಾರ್ಯಕ್ರಮ ಅದ್ಧೂರಿಯಾಗಿ ಶುರುವಾಗ್ತಿದೆ. ಶುಕ್ರವಾರ ಜುಲೈ 14ರಿಂದ ಶನಿವಾರ ಜುಲೈ 15ರವರೆಗೆ ಐಫಾ ಕಾರ್ಯಕ್ರಮ ನಡೆಯಲಿದೆ. ಐಫಾ ಕಾರ್ಯಕ್ರಮಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ಮಾಜಿ  ಪ್ರೇಯಸಿಗೆ ಶಾಕ್ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ನ ಅನೇಕ ತಾರೆಯರು ಉಪಸ್ಥಿತರಿದ್ದರು. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಅನುಪಮ್ ಖೇರ್, ಶಾಹಿದ್ ಕಪೂರ್, ಆಲಿಯಾ ಭಟ್, ಸುಶಾಂತ್ ಸಿಂಗ್ ರಜಪೂತ್ ಹಾಗೂ ವರುಣ್ ಧವನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ವೇಳೆ ಎಲ್ಲ ಕಲಾವಿದರು ಒಬ್ಬೊಬ್ಬರಾಗಿ ಐಫಾ ಅನುಭವವನ್ನು ಹಂಚಿಕೊಂಡ್ರು. ತಮ್ಮ ಸರದಿ ಬರ್ತಿದ್ದಂತೆ ಅನುಪಮ್ ಖೇರ್ ಬಳಿ ಐಫಾ ದಿನಾಂಕವನ್ನು ಕೇಳಿದ ಸಲ್ಮಾನ್, ನನಗೆ ದಿನಾಂಕ ನೆನಪಿರೋದಿಲ್ಲ. ಆದ್ರೆ ಕತ್ರಿನಾ ಕೈಫ್ ಬರ್ತ್ ಡೇ ಮರೆಯೋದಿಲ್ಲ ಎಂದ್ರು. ಇಷ್ಟೇ ಅಲ್ಲ ಕತ್ರಿನಾ ಕೈಫ್ ಗೆ ಬರ್ತ್ ಡೇ ವಿಶ್ ಮಾಡ್ತಾ ಹಾಡು ಹೇಳಿ ಶಾಕ್ ನೀಡಿದ್ರು. ಕತ್ರಿನಾ ಇದೇ ಜುಲೈ 16ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...