alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರೋ ರಾತ್ರಿ ಸ್ಟಾರ್ ಆದ್ಲು ಈ ಹುಡುಗಿ

rinku

ಅದೃಷ್ಟ ಕೈ ಹಿಡಿದ್ರೆ ಭಿಕ್ಷೆ ಬೇಡುವವನು ಸಹ ಉಪ್ಪರಿಗೆ ಏರ್ತಾನಂತೆ. ಈ ಮಾತು ಅನೇಕರ ಜೀವನದಲ್ಲಿ ಸತ್ಯವಾಗಿದೆ. ಮಹಾರಾಷ್ಟ್ರದ 14 ವರ್ಷದ ಹುಡುಗಿ ಕೈ ಹಿಡಿದಿದ್ದಾನೆ ಭಗವಂತ. ಸೀದಾ ಸಾದಾ ಇದ್ದ ಹುಡುಗಿ ಈಗ ಸ್ಟಾರ್ ಆಗಿದ್ದಾಳೆ.

ಆಕೆ ಹೆಸರು ರಿಂಕು ರಾಜಗುರು. ಸೋಲಾಪುರ ಜಿಲ್ಲೆಯ ಅಕಲುಜ್ ಗ್ರಾಮದ ನಿವಾಸಿ. ಸದ್ಯ ತೆರೆಗೆ ಬಂದ ಮರಾಠಿ ಚಿತ್ರ ‘ಶರತ್’ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ ರಿಂಕು. ಶರತ್ ಚಿತ್ರದಲ್ಲಿ ಆರ್ಚೀ ಪಾತ್ರದಲ್ಲಿ ಮಿಂಚಿದ್ದಾಳೆ ರಿಂಕು. ನಿರ್ದೇಶಕ ನಾಗರಾಜ್, ರಿಂಕು ಊರಿಗೆ ಕೆಲಸದ ಮೇಲೆ ಹೋಗಿದ್ದರು. ಅಲ್ಲಿ ಸ್ನೇಹಿತರ ಮನೆಗೆ ರಿಂಕು ಬಂದಿದ್ದಳಂತೆ. ಆಕೆಯನ್ನು ನೋಡಿದ ನಿರ್ದೇಶಕರು ಚಿತ್ರದಲ್ಲಿ ನಟಿಸುವಂತೆ ರಿಂಕುವನ್ನು ಕೇಳಿದ್ದಾರೆ. 15 ನಿಮಿಷ ಆಡಿಷನ್ ಕೂಡ ಮಾಡಿದ್ದಾರೆ.

ಕೆಲ ದಿನಗಳ ನಂತ್ರ ಕರೆ ಮಾಡಿ, ಚಿತ್ರಕ್ಕೆ ಸೆಲೆಕ್ಟ್ ಆಗಿರುವುದಾಗಿ ತಿಳಿಸಿದ್ದಾರೆ. ‘ಶರತ್’ ಚಿತ್ರದಲ್ಲಿ ರಿಂಕು ಅಭಿನಯ ಮನೋಜ್ಞವಾಗಿದೆ. ಅಮೀರ್ ಖಾನ್, ಸುಭಾಷ್ ಘಾಯ್, ರಿತೇಶ್ ದೇಶ್ಮುಖ್ ರಿಂಕು ನಟನೆಯನ್ನು ಹಾಡಿ ಹೊಗಳಿದ್ದಾರೆ. ಉತ್ತಮ ಅಭಿನಯಕ್ಕಾಗಿ ರಿಂಕು ರಾಷ್ಟ್ರೀಯ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...