alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಮೌಳಿ ಚಿತ್ರದಲ್ಲಿ ಜೂನಿಯರ್ NTR, ರಾಮ್ ಚರಣ್

‘ಬಾಹಬುಲಿ -2’ ಭರ್ಜರಿ ಯಶಸ್ಸಿನ ಬಳಿಕ ಎಸ್.ಎಸ್. ರಾಜಮೌಳಿ ಯಾವ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್., ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇದಕ್ಕೆ ಪೂರಕವೆನ್ನುವಂತೆ ರಾಜಮೌಳಿ ಅವರು ಜಾಲತಾಣದಲ್ಲಿ ಹಾಕಿರುವ ಈ ಫೋಟೋ ವೈರಲ್ ಆಗಿದೆ.

‘ಬಾಹುಬಲಿ -2’ ಚಿತ್ರದಲ್ಲಿ ಅಭಿನಯಿಸಿದ್ದ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ ಮೊದಲಾದವರು ಈಗಾಗಲೇ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ರಾಜಮೌಳಿ ಮಾತ್ರ ತಮ್ಮ ಮುಂದಿನ ಚಿತ್ರದ ಕುರಿತಾಗಿ ಗುಟ್ಟು ಬಿಟ್ಟುಕೊಟ್ಟಿಲ್ಲ.

ಹಿಂದೆ ರಾಮ್ ಚರಣ್ ಅಭಿನಯದ ‘ಮಗಧೀರ’ ನಿರ್ದೇಶಿಸಿದ್ದ ರಾಜಮೌಳಿ, ಜೂನಿಯರ್ ಎನ್.ಟಿ.ಆರ್. ಅವರೊಂದಿಗೆ ‘ಯಮದೊಂಗ’ ಸೇರಿ ಹಲವು ಚಿತ್ರಗಳನ್ನು ಮಾಡಿದ್ದಾರೆ. ಅವರೀಗ, ಇವರಿಬ್ಬರೊಂದಿಗೆ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...