alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ-2 ಚಿತ್ರವನ್ನು ನೋಡ್ತಾರಾ ಬ್ರಿಟನ್ ರಾಣಿ..?

queen

ಎಸ್.ಎಸ್.ರಾಜಮೌಳಿ ಅವರ ‘ಬಾಹುಬಲಿ-ದಿ ಕನ್ ಕ್ಲೂಶನ್’ ಚಿತ್ರ ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಸಿನಿಪ್ರಿಯರನ್ನು ಕುತೂಹಲದಲ್ಲಿ ಮುಳುಗಿಸಿರುವ ಚಿತ್ರ ಇದು.

ಮೂಲಗಳ ಪ್ರಕಾರ ಬ್ರಿಟನ್ ರಾಣಿ ಎಲಿಜಬೆತ್-2 ‘ಬಾಹುಬಲಿ-ದಿ ಕನ್ ಕ್ಲೂಶನ್’ ಚಿತ್ರವನ್ನು ಮೊದಲು ವೀಕ್ಷಿಸಲಿದ್ದಾರಂತೆ. ಬ್ರಿಟಿಷ್ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ನಡೆಯಲಿರುವ ‘ಇಂಡಿಯಾ ಆನ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಣಿ ಎಲಿಜಬೆತ್ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಜಮೌಳಿ ಅವರ ‘ಬಾಹುಬಲಿ – ದಿ ಕನ್ ಕ್ಲೂಶನ್’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಬಾಹುಬಲಿಯ ಸೀಕ್ವಲ್ ‘ಬಾಹುಬಲಿ – ದಿ ಕನ್ ಕ್ಲೂಶನ್’ ಚಿತ್ರ ಎಪ್ರಿಲ್ 28ರಂದು ಬಿಡುಗಡೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...