alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಹೋದರಿ ಸುಮ್ಮನಿರಲು ಕಾರಣವೇನು ಗೊತ್ತಾ?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸಾವಿನ ನಂತ್ರ ಅವ್ರ ಸಹೋದರಿ ಶ್ರೀಲತಾ ಸುದ್ದಿಯಲ್ಲಿದ್ದಾರೆ. ಶ್ರೀಲತಾ ಬಗ್ಗೆ ಅನೇಕ ಮಾತುಗಳು ಕೇಳಿ ಬರ್ತಿವೆ. ಶ್ರೀದೇವಿ ಸಾವಿನ ಬಗ್ಗೆ ಶ್ರೀಲತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಕೂಡ ವಿವಾದಕ್ಕೆ ಕಾರಣವಾಗಿದೆ. ಆದ್ರೀಗ ಶ್ರೀಲತಾ ಮೌನಕ್ಕೆ ಕಾರಣವೇನು ಎಂಬುದು ಗೊತ್ತಾಗಿದೆ.

ಶ್ರೀಲತಾ ಪತಿ ಸಂಜಯ್ ಮೌನ ಮುರಿದಿದ್ದಾರೆ. ಶ್ರೀಲತಾ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಶ್ರೀದೇವಿ ಸಾವಿನಿಂದ ಶ್ರೀಲತಾ ಆಘಾತಕ್ಕೊಳಗಾಗಿದ್ದಾರೆ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಸಂಜಯ್ ಹೇಳಿದ್ದಾರೆ. ಶ್ರೀದೇವಿ ಹಾಗೂ ಕಪೂರ್ ಕುಟುಂಬದ ಜೊತೆ ಶ್ರೀಲತಾ ಸಂಬಂಧ ಚೆನ್ನಾಗಿದೆ. ಶ್ರೀಲತಾ ಬೋನಿ ಕಪೂರ್ ಬೆಂಬಲಕ್ಕಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ.

ಶ್ರೀಲತಾ, ಶ್ರೀದೇವಿ ಆಸ್ತಿಯನ್ನು ಕಬಳಿಸಿಲ್ಲ. ಶ್ರೀದೇವಿ ಚಿಕ್ಕಪ್ಪ ವೇಣುಗೋಪಾಲ್ ರೆಡ್ಡಿ ಮಾಡಿರುವ ಆರೋಪವೆಲ್ಲ ಸುಳ್ಳು. ಶ್ರೀದೇವಿ ಸಾವಿನ ವೇಳೆ ಯಾವುದೇ ದುಃಖದಲ್ಲಿರಲಿಲ್ಲ. ಯಾವುದೇ ಸಮಸ್ಯೆ ಅವರನ್ನು ಕಾಡುತ್ತಿರಲಿಲ್ಲವೆಂದು ಸಂಜಯ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...