alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮೇಶ್ವರಂನಲ್ಲಿ ನಟಿ ಶ್ರೀದೇವಿ ಅಸ್ತಿ ವಿಸರ್ಜನೆ

ಫೆಬ್ರವರಿ 24ರಂದು ಇಹಲೋಕ ತ್ಯಜಿಸಿದ್ದ ನಟಿ ಶ್ರೀದೇವಿ ಚಿತಾಭಸ್ಮವನ್ನು ಚೆನ್ನೈಗೆ ಕೊಂಡೊಯ್ಯಲಾಗ್ತಿದೆ. ಕುಟುಂಬಸ್ಥರೊಂದಿಗೆ ರಾಮೇಶ್ವರಂಗೆ ತೆರಳಿ ಬೋನಿ ಕಪೂರ್, ಶ್ರೀದೇವಿ ಅಸ್ತಿಯನ್ನು ವಿಸರ್ಜನೆ ಮಾಡಲಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಿಂದ ಫಾಲ್ಕನ್ 2000 ವಿಮಾನದಲ್ಲಿ ಬೋನಿ ಕಪೂರ್ ಹಾಗೂ ಕುಟುಂಬದವರು ಪ್ರಯಾಣ ಬೆಳೆಸಲಿದ್ದಾರೆ. ಇಂದು ರಾತ್ರಿಯೇ ಅಲ್ಲಿಂದ ವಾಪಸ್ ಮುಂಬೈಗೆ ಮರಳುವ ಸಾಧ್ಯತೆ ಇದೆ.

ರಾಮೇಶ್ವರಂ ಚೆನ್ನೈನಿಂದ 550 ಕಿಮೀ ದೂರದಲ್ಲಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮೃತರ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಗುತ್ತದೆ. ಬುಧವಾರವಷ್ಟೇ ನಟಿ ಶ್ರೀದೇವಿ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮುಂಬೈನಲ್ಲಿ ನೆರವೇರಿಸಲಾಗಿತ್ತು.

ಮದುವೆ ಸಮಾರಂಭಕ್ಕಾಗಿ ದುಬೈಗೆ ತೆರಳಿದ್ದ ಶ್ರೀದೇವಿ, ಫೆಬ್ರವರಿ 24ರಂದು ಹೋಟೆಲ್ ನ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ಶ್ರೀದೇವಿ ಮೃತದೇಹವನ್ನು ಭಾರತಕ್ಕೆ ತರಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...