alex Certify
ಕನ್ನಡ ದುನಿಯಾ       Mobile App
       

Kannada Duniya

“ಶ್ರೀದೇವಿ ದುಃಖಕ್ಕೆ ಕಾರಣವಾಗಿದ್ದರು ಬೋನಿ ಕಪೂರ್’’

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇನ್ನಿಲ್ಲ ಎಂಬ ಸತ್ಯವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಶ್ರೀದೇವಿ ದುಬೈನ ಹೊಟೇಲ್ ನಲ್ಲಿ ಬಾತ್ ಟಬ್ ನಲ್ಲಿ ಬಿದ್ದು ಸಾವನ್ನಪ್ಪಿ 12 ದಿನ ಕಳೆದಿದೆ. ಈಗ ಶ್ರೀದೇವಿ ಚಿಕ್ಕಪ್ಪ ವೇಣುಗೋಪಾಲ್ ಶ್ರೀದೇವಿ ಜೀವನದ ಅನೇಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ನಟಿ ಶ್ರೀದೇವಿ ಸುಖವಾಗಿರಲಿಲ್ಲವಂತೆ. ಸಾಕಷ್ಟು ನೋವುಂಡಿದ್ದರಂತೆ. ಅದಕ್ಕೆಲ್ಲ ಪತಿ ಬೋನಿ ಕಪೂರ್ ಕಾರಣರಾಗಿದ್ದರಂತೆ. ಶ್ರೀದೇವಿ ತಾಯಿಗೆ ಬೋನಿ ಕಪೂರ್ ಇಷ್ಟವಿರಲಿಲ್ಲವಂತೆ. ಶ್ರೀದೇವಿ-ಬೋನಿ ಕಪೂರ್ ಮದುವೆಯಾಗುವುದು ಶ್ರೀದೇವಿ ತಾಯಿಗೂ ಒಪ್ಪಿಗೆಯಿರಲಿಲ್ಲವಂತೆ.

ತಾಯಿಗೆ ವಿರುದ್ಧವಾಗಿ ಶ್ರೀದೇವಿ ಬೋನಿ ಕಪೂರ್ ಮದುವೆಯಾಗಿದ್ದರಂತೆ. ಶ್ರೀದೇವಿ ಮದುವೆ ನಂತ್ರ ಸಾಕಷ್ಟು ನೋವು ಕಂಡಿದ್ದರು ಎಂದು ವೇಣುಗೋಪಾಲ್ ಹೇಳಿದ್ದಾರೆ. ಬೋನಿ ಕಪೂರ್ ಚಿತ್ರ ಮಾಡುವ ಹುಚ್ಚಿನಲ್ಲಿ ತಮ್ಮೆಲ್ಲ ಆಸ್ತಿ ಕಳೆದುಕೊಂಡಿದ್ದರಂತೆ. ಬೋನಿ ನಿರ್ಮಾಣ ಮಾಡಿದ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲವಂತೆ. ಈ ಎಲ್ಲ ನಷ್ಟ ತುಂಬಲು ಶ್ರೀದೇವಿ ಆಸ್ತಿ ಮಾರಾಟ ಮಾಡಿದ್ದರಂತೆ ಬೋನಿ. ಈ ನೋವು ಶ್ರೀದೇವಿಯನ್ನು ಕಾಡುತ್ತಿತ್ತಂತೆ. ನೋವಿನೊಂದಿಗೆ ಇಹಲೋಕ ತ್ಯಜಿಸಿದ್ರು ಎಂದು ವೇಣುಗೋಪಾಲ್ ಕಣ್ಣೀರು ಹಾಕಿದ್ದಾರೆ.

ಶ್ರೀದೇವಿ ಮನಸ್ಸಿನಲ್ಲಿ ಶಾಂತಿಯಿರಲಿಲ್ಲ. ಇಬ್ಬರ ಕೈನಲ್ಲೂ ಹಣವಿರಲಿಲ್ಲ. ಪತಿಗಾಗಿ ಎಲ್ಲ ಆಸ್ತಿ ಮಾರಿದ್ದ ಶ್ರೀದೇವಿ ಜನರ ಮುಂದೆ ನಗುವಿನ ನಾಟಕ ಮಾಡುತ್ತಿದ್ದರಂತೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಶ್ರೀದೇವಿ ಇದೇ ಕಾರಣಕ್ಕೆ ಮತ್ತೆ ಚಿತ್ರರಂಗಕ್ಕೆ ವಾಪಸ್ ಬಂದಿದ್ದರಂತೆ.

ಶ್ರೀದೇವಿಗೆ ಮಕ್ಕಳಿಬ್ಬರ ಭವಿಷ್ಯದ ಚಿಂತೆ ಕಾಡುತ್ತಿದ್ದಂತೆ. ಬೋನಿ ಕಪೂರ್ ಆರೋಗ್ಯದ ಬಗ್ಗೆಯೂ ಶ್ರೀದೇವಿ ತಲೆಕೆಡಿಸಿಕೊಂಡಿದ್ದರಂತೆ. ತಾಯಿಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದ ಅಮೆರಿಕಾ ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ ಮಾಡಿ ಪರಿಹಾರ ಪಡೆದಿದ್ದರಂತೆ. ಆದ್ರೆ ಇದೇ ವಿಚಾರ ಶ್ರೀದೇವಿ ಹಾಗೂ ಸಹೋದರಿ ನಡುವೆ ಬಿರುಕು ಮೂಡಿಸಿತ್ತಂತೆ. ಪರಿಹಾರದ ಹಣದ ಜೊತೆ ಪ್ರತಿ ತಿಂಗಳು ಸಹೋದರಿಗೆ ಹಣ ನೀಡುತ್ತಿದ್ದರಂತೆ ಶ್ರೀದೇವಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...