alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ರಜನಿ, ಕಮಲ್ ಗೈರಾಗಿದ್ದೇಕೆ…?

ನಟಿ ಶ್ರೀದೇವಿ ತಮಿಳುನಾಡು ಮೂಲದವರು. ಹಾಗಾಗಿ ತಮಿಳು ಚಿತ್ರರಂಗ ಅಗಲಿದ ಕಲಾವಿದೆಗಾಗಿ ಚೆನ್ನೈನಲ್ಲಿ ಶ್ರದ್ಧಾಂಜಲಿ ಹಮ್ಮಿಕೊಂಡಿತ್ತು. ಶ್ರೀದೇವಿ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ, ಖುಷಿ ಕೂಡ ಮುಂಬೈನಿಂದ ಆಗಮಿಸಿದ್ದರು.

ಕಾಲಿವುಡ್ ನ ಬಹಳಷ್ಟು ಸೆಲೆಬ್ರಿಟಿಗಳು ಕೂಡ ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ನಟ ಸೂರ್ಯ, ಪತ್ನಿ ಜ್ಯೋತಿಕಾ, ಸಹೋದರ ಕಾರ್ತಿ ಆಗಮಿಸಿ ಶ್ರೀದೇವಿಗೆ ಭಾವಪೂರ್ಣ ನಮನ ಸಲ್ಲಿಸಿದ್ರು.

Path of Flowers for our Beloved .

A post shared by Manish Malhotra (@manishmalhotra05) on

ಎ.ಆರ್.ರೆಹಮಾನ್ ಮತ್ತವರ ಪತ್ನಿ, ಲತಾ ರಜನೀಕಾಂತ್, ಮೀನಾ, ರಾಧಿಕಾ ಶರತ್ ಕುಮಾರ್, ಸುಹಾಸಿನಿ, ನಟ ಅಜಿತ್, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀದೇವಿ ಅವರ ಚೆನ್ನೈ ನಿವಾಸದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದ್ರೆ ತಮಿಳು ಚಿತ್ರರಂಗದ ಖ್ಯಾತ ನಟರಾದ ರಜನೀಕಾಂತ್ ಹಾಗೂ ಕಮಲ್ ಹಾಸನ್ ಬಂದಿರಲಿಲ್ಲ.

ರಜನೀಕಾಂತ್ ಹಿಮಾಲಯಕ್ಕೆ ತೆರಳಿದ್ದಾರೆ. ಕಮಲ್ ಹಾಸನ್ ಜಿಲ್ಲಾ ಪ್ರವಾಸದಲ್ಲಿರುವುದರಿಂದ ಶ್ರೀದೇವಿ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ರಜನಿ ಹಾಗೂ ಕಮಲ್ ಇಬ್ಬರೂ ಶ್ರೀದೇವಿ ಜೊತೆಗೆ ಸಾಕಷ್ಟು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಆತ್ಮೀಯ ಸ್ನೇಹಿತರು ಕೂಡ ಆಗಿದ್ದರು. ದುಬೈನಲ್ಲಿ ಶ್ರೀದೇವಿ ಸಾವನ್ನಪ್ಪಿರುವ ಸುದ್ದಿ ಕೇಳುತ್ತಿದ್ದಂತೆ, ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...