alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರಗಳಲ್ಲಿ ನಟಿ ಶ್ರೀದೇವಿ ಸಿನಿ ಬದುಕಿನ ಪಯಣ….

ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀದೇವಿ ತಮ್ಮ 54 ನೇ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ತಮ್ಮ 13 ನೇ ವಯಸ್ಸಿನಲ್ಲಿ ತಮಿಳು ಚಿತ್ರ ‘ಮೂಂಡ್ರು ಮುಡಿಚು’ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಶ್ರೀದೇವಿ ತಮ್ಮ ಸಿನಿ ಬದುಕಿನಲ್ಲಿ ಉತ್ತುಂಗಕ್ಕೇರಿದ್ದರು.

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿದ್ದ ಶ್ರೀದೇವಿ, ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ನಿರ್ಮಾಪಕ ಬೋನಿ ಕಪೂರ್ ಜೊತೆ ಶ್ರೀದೇವಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಜಾಹ್ನವಿ ಹಾಗೂ ಖುಷಿ ಎಂಬಿಬ್ಬರು ಮಕ್ಕಳಿಗೆ ತಾಯಿಯಾಗಿದ್ದರು.

ಮಕ್ಕಳನ್ನೂ ಚಿತ್ರರಂಗದಲ್ಲಿ ತೊಡಗಿಸಬೇಕೆಂಬ ಕನಸು ಕಂಡಿದ್ದ ಶ್ರೀದೇವಿ ಇದಕ್ಕಾಗಿ ಹಿಂದಿನಿಂದಲೂ ವೇದಿಕೆ ಸಿದ್ದಪಡಿಸಿದ್ದು, ಅವರ ಹಿರಿಯ ಪುತ್ರಿ ಜಾಹ್ನವಿ ಕಪೂರ್ ರ ಚೊಚ್ಚಲ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಮಗಳ ಚಿತ್ರ ಬಿಡುಗಡೆಗೂ ಮುನ್ನವೇ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಿನಿ ಬದುಕಿನ ಕೆಲ ಚಿತ್ರಗಳು ಇಲ್ಲಿವೆ. ಅಲ್ಲದೇ ಶ್ರೀದೇವಿಯವರು ದುಬೈನಲ್ಲಿ ಪಾಲ್ಗೊಂಡಿದ್ದ ಕೊನೆ ಸಮಾರಂಭದ ಚಿತ್ರವೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...