alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಶ್ರೀದೇವಿ ಹೊಂದಿದ್ದ ಆಸ್ತಿ ಮೌಲ್ಯ ಎಷ್ಟು ಗೊತ್ತಾ…?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸುಮಾರು 300 ಕೋಟಿ ಮೌಲ್ಯದ ಆಸ್ತಿಯನ್ನು ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಬಿಟ್ಟು ಹೋಗಿದ್ದಾರೆ. ಇದ್ರಲ್ಲಿ ಪತಿ ಬೋನಿ ಕಪೂರ್ ಆಸ್ತಿ ಸೇರಿಲ್ಲ. ಬೋನಿ ಕಪೂರ್ ಆಸ್ತಿಯನ್ನೂ ಸೇರಿಸಿದ್ರೆ ಆಸ್ತಿ ಮೌಲ್ಯ 500 ಕೋಟಿ ದಾಟಲಿದೆ.

2018ರಲ್ಲಿ ಶ್ರೀದೇವಿ ನಿವ್ವಳ ಆಸ್ತಿ 247 ರೂಪಾಯಿಯಾಗಿತ್ತು. ಕಳೆದ ಕೆಲ ವರ್ಷಗಳಿಂದ ಶ್ರೀದೇವಿ ಗಳಿಕೆಯಲ್ಲಿ ವೃದ್ಧಿಯಾಗಿತ್ತು. 2011ರಲ್ಲಿ ಚಲನಚಿತ್ರ ರಂಗಕ್ಕೆ ಶ್ರೀದೇವಿ ವಾಪಸ್ ಬರ್ತಿದ್ದಂತೆ ಅವರ ಗಳಿಕೆ ವರ್ಷಕ್ಕೆ ಸುಮಾರು 13 ಕೋಟಿ ರೂಪಾಯಿಯಾಗಿತ್ತು.

ದೇಶದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೇ ಹೆಸರಾಗಿದ್ದ ಶ್ರೀದೇವಿ ಇತ್ತೀಚೆಗಷ್ಟೇ 2 ಕೋಟಿ ರೂಪಾಯಿಯ ಕಾರ್ ಖರೀದಿ ಮಾಡಿದ್ದರು. ಶ್ರೀದೇವಿಗೆ ಕಾರ್ ಮೇಲೆ ಹೆಚ್ಚಿನ ಮೋಹವಿರಲಿಲ್ಲ. ಆದ್ರೆ ಶ್ರೀದೇವಿ ದೊಡ್ಡ ಐಷಾರಾಮಿ ಕಾರ್ ಖರೀದಿ ಮಾಡುತ್ತಿದ್ದರು. ಅವರ ಬಳಿ ಆಡಿ, ಫೋರ್ಡ್ ಸೇರಿದಂತೆ 7 ಕಾರುಗಳಿದ್ದವು. ಇದ್ರ ಒಟ್ಟು ಮೌಲ್ಯ 9 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಶ್ರೀದೇವಿ ತನ್ನ ಸಂಪಾದನೆಯಲ್ಲಿ ಮುಂಬೈನಲ್ಲಿ ಮೂರು ಮನೆಗಳನ್ನು ಹೊಂದಿದ್ದಾರೆ. ಈ ಮನೆಗಳ ಇಂದಿನ ಮಾರುಕಟ್ಟೆ ಮೌಲ್ಯ 62 ಕೋಟಿ ರೂಪಾಯಿ. ಚಿತ್ರಗಳಿಗೆ ಶ್ರೀದೇವಿ 3.4 ರಿಂದ 4.5 ಕೋಟಿ ರೂಪಾಯಿ ಪಡೆಯುತ್ತಿದ್ದರು. ಲಕ್ಸ್ ಹಾಗೂ ತನಿಷ್ಕ ಬ್ರ್ಯಾಂಡ್ ನ ರಾಯಬಾರಿಯಾಗಿದ್ದ ಶ್ರೀದೇವಿಗೆ ಅಲ್ಲಿಂದಲೂ ಹಣ ಬರ್ತಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...