alex Certify
ಕನ್ನಡ ದುನಿಯಾ       Mobile App
       

Kannada Duniya

ಅಯ್ಯಂಗಾರಿ ಸಂಪ್ರದಾಯದಂತೆ ಶ್ರೀದೇವಿ ಅಂತ್ಯಕ್ರಿಯೆ

ಮುಂಬೈ: ದುಬೈ ಹೋಟೆಲ್ ನಲ್ಲಿ ಫೆಬ್ರವರಿ 24 ರಂದು ನಿಧನರಾದ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ, ಮುಂಬೈನ ವಿಲೇಪಾರ್ಲೆಯ ಚಿತಾಗಾರದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿದೆ.

ಚಿತ್ರರಂಗದ ಗಣ್ಯರು, ಬಂಧುಗಳು ಅಪಾರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದ ಬಳಿಕ, ಅಯ್ಯಂಗಾರಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿದೆ. ಬೆಳಿಗ್ಗೆಯಿಂದಲೂ ಅಪಾರ ಸಂಖ್ಯೆಯ ಮಂದಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ. ಮಧ್ಯಾಹ್ನ ಆರಂಭವಾದ ಪಾರ್ಥಿವ ಶರೀರದ ಮೆರವಣಿಗೆ ಚಿತಾಗಾರವನ್ನು ತಲುಪಿದೆ.

ಚಿತಾಗಾರದಲ್ಲಿ ಕುಟುಂಬದವರು ಅಂತಿಮ ವಿಧಿ ವಿಧಾನ ಪೂರೈಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಜನರ ಕಣ್ಣಾಲಿಗಲು ತುಂಬಿ ಬಂದಿವೆ. ಭಾರತೀಯ ಚಿತ್ರರಂಗದ ತಾರೆಯಾಗಿ ಬೆಳಗಿದ ಶ್ರೀದೇವಿ ಮರೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...