alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹ್ನವಿಗೆ ಶ್ರೀದೇವಿ ಸಾವಿನ ಸುದ್ದಿ ಹೇಳಿದ್ಯಾರು ಗೊತ್ತಾ?

ಬಾಲಿವುಡ್ ನಟಿ ಶ್ರೀದೇವಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಜಾಹ್ನವಿ ಬೆಳ್ಳಿ ತೆರೆ ಮೇಲೆ ಬರುವ ತಯಾರಿ ನಡೆಸಿದ್ದಾಳೆ. ಮಗಳನ್ನು ಸಿಲ್ವರ್ ಸ್ಕ್ರೀನ್ ಮೇಲೆ ನೋಡುವ ಆಸೆ ಶ್ರೀದೇವಿಗಿತ್ತು. ಇದಕ್ಕಾಗಿ ಶ್ರೀದೇವಿ ಪ್ರಯತ್ನ ಶುರು ಮಾಡಿದ್ದರು. ಆದ್ರೆ ಮಗಳ ಸಿನಿಮಾ ತೆರೆ ಮೇಲೆ ಬರುವ ಮುನ್ನವೇ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ.

ಶ್ರೀದೇವಿ ಕೊನೆ ಕ್ಷಣಗಳಲ್ಲಿ ಮಗಳು ಜಾಹ್ನವಿ ತಾಯಿ ಜೊತೆಗಿರಲಿಲ್ಲ. ಈ ನೋವು ಜಾಹ್ನವಿಗೆ ಯಾವಾಗ್ಲೂ ಕಾಡಲಿದೆ. ಜಾಹ್ನವಿ ಅಮ್ಮನ ಜೊತೆ ತುಂಬಾ ಆಪ್ತಳಾಗಿದ್ದಳು. ಆದ್ರೆ ಜಾಹ್ನವಿ ದುಬೈಗೆ ಹೋಗಿರಲಿಲ್ಲ. ಶ್ರೀದೇವಿ ಸಾವಿನ ಸುದ್ದಿಯನ್ನು ಜಾಹ್ನವಿಗೆ ಮುಟ್ಟಿಸಿದ್ದು ನಿರ್ಮಾಪಕ ಕರಣ್ ಜೋಹರ್.

ಮುಂಬೈನಲ್ಲಿರುವ ಜಾಹ್ನವಿ ಮನೆಗೆ ತೆರಳಿದ ಕರಣ್ ಜೋಹರ್, ಜಾಹ್ನವಿಯನ್ನು ಚಿಕ್ಕಪ್ಪ ಅನಿಲ್ ಕಪೂರ್ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಾಯಿ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿಯನ್ನು ಜಾಹ್ನವಿಗೆ ಹೇಳಿದ್ದಾರೆ. ತಾಯಿ ಸಾವಿನ ಸುದ್ದಿಯನ್ನು ಮಗಳಿಗೆ ಹೇಳೋದು ಸುಲಭದ ಮಾತಲ್ಲ. ಶ್ರೀದೇವಿ ಇನ್ನಿಲ್ಲ ಎಂಬ ಮಾತು ಕೇಳಿ ಜಾಹ್ನವಿ ದಿಗ್ಭ್ರಮೆಗೊಂಡಿದ್ದಾಳಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...