alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿನ ಕುರಿತು ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ

ತಮ್ಮ ಸಂಬಂಧಿಯ ವಿವಾಹ ಸಮಾರಂಭಕ್ಕೆಂದು ದುಬೈಗೆ ತೆರಳಿದ್ದ ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಫೆಬ್ರವರಿ 24ರಂದು ತಾವು ತಂಗಿದ್ದ ಪಂಚತಾರಾ ಹೋಟೆಲ್ ನಲ್ಲಿನ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಆ ಸಂದರ್ಭದಲ್ಲಿ ಶ್ರೀದೇವಿಯವರ ಸಾವಿನ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗಿದ್ದವಾದರೂ ಪ್ರಕರಣದ ತನಿಖೆ ನಡೆಸಿದ್ದ ದುಬೈ ಪೊಲೀಸರು, ಶ್ರೀದೇವಿ ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ವರದಿ ನೀಡಿದ್ದರು.

ಇದಾದ ಬಳಿಕ ಶ್ರೀದೇವಿಯವರ ಮೃತ ದೇಹವನ್ನು ಭಾರತಕ್ಕೆ ತಂದು ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ನಂತರವೂ ಶ್ರೀದೇವಿ ಸಾವಿನ ಕುರಿತು ಊಹಾಪೋಹಗಳು ಹರಡಿದ್ದು, ಬಾಲಿವುಡ್ ನಿರ್ಮಾಪಕರೊಬ್ಬರು ಶ್ರೀದೇವಿ ಸಾವಿನ ತನಿಖೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನು ಹೈಕೋರ್ಟ್ ತಳ್ಳಿಹಾಕಿದ್ದು, ಬಳಿಕ ಆ ನಿರ್ಮಾಪಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಕೋರ್ಟ್ ಕೂಡಾ ಹೈಕೋರ್ಟ್ ತೀರ್ಪನ್ನು ಮಾನ್ಯ ಮಾಡಿ ಅರ್ಜಿಯನ್ನು ವಜಾಗೊಳಿಸಿತ್ತು.

ಇದಾದ ಬಳಿಕ ದೆಹಲಿಯ ನಿವೃತ್ತ ಸಹಾಯಕ ಪೊಲೀಸ್ ಕಮೀಷನರ್ ವೇದ್ ಭೂಷಣ್ ಎಂಬವರು, ಶ್ರೀದೇವಿಯದು ಆಕಸ್ಮಿಕ ಸಾವಲ್ಲ ಅದೊಂದು ಪೂರ್ವನಿಯೋಜಿತ ಕೊಲೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ತಾವು ಇದರ ತನಿಖೆಗಾಗಿ ದುಬೈಗೆ ತೆರಳಿದ್ದು, ಶ್ರೀದೇವಿ ತಂಗಿದ್ದ ಹೋಟೆಲ್ ರೂಂ ನ ಪಕ್ಕದ ರೂಂ ನಲ್ಲಿ ತಂಗಿ ಕೆಲವೊಂದು ಸಾಕ್ಷಾಧಾರಗಳನ್ನು ಪರಿಶೀಲಿಸಿದ್ದಾಗಿ ಹೇಳಿಕೊಂಡಿದ್ದರು.

ಇದೀಗ ಮತ್ತೊಂದು ಸಂಗತಿಯನ್ನು ಅವರು ಬಹಿರಂಗಪಡಿಸಿದ್ದು, ಶ್ರೀದೇವಿ ಸಾವಿನ ಹಿಂದೆ ಕುಖ್ಯಾತ ಭೂಗತಪಾತಕಿ ದಾವೂದ್ ಇಬ್ರಾಹಿಂ ಕೈವಾಡವಿದೆ ಎಂದು ಹೇಳಿದ್ದಾರೆ. ಅಲ್ಲದೇ, ಶ್ರೀದೇವಿ ಹೆಸರಿನಲ್ಲಿ 240 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿತ್ತು. ಆಕೆಯ ಸಾವಿನ ಬಳಿಕವಷ್ಟೇ ಇದು ಸಂಬಂಧಿಸಿದವರಿಗೆ ದೊರಕುತ್ತಿತ್ತು ಎಂದಿದ್ದಾರೆ. ದುಬೈ ಹೋಟೆಲ್ ನಲ್ಲಿ ನಡೆಸಿದ ತನಿಖೆ ವೇಳೆ ತಾವು ಕೆಲವೊಂದು ಸಾಕ್ಷಾಧಾರಗಳನ್ನು ಕಲೆಹಾಕಿದ್ದು, ಇದನ್ನು ನ್ಯಾಯಾಲಯದ ಮುಂದಿಡುವ ಮೂಲಕ ಶ್ರೀದೇವಿಯವರ ಸಾವಿನ ತನಿಖೆಗೆ ಆದೇಶಿಸುವಂತೆ ಮನವಿ ಮಾಡುವುದಾಗಿ ವೇದ್ ಭೂಷಣ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...