alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ಸೆಟ್ ನಲ್ಲಿ ನಗ್ತಿದ್ದಾಳೆ ಶ್ರೀದೇವಿ ಮಗಳು

ಖ್ಯಾತ ನಟಿ ಶ್ರೀದೇವಿ ಹಿರಿ ಮಗಳು ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಶೀಘ್ರವೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾಳೆ. ಶೂಟಿಂಗ್ ಸೆಟ್ ನ ಕೆಲ ಫೋಟೋಗಳು ವೈರಲ್ ಆಗಿವೆ. ಜಾಹ್ನವಿ ರೀಲ್ ನಾಯಕ ಇಶಾನ್ ಖಟ್ಟರ್ ಜೊತೆ ಕಾಣಿಸಿಕೊಂಡಿದ್ದಾಳೆ.

ತಾಯಿ ಶ್ರೀದೇವಿ ಇಹಲೋಕ ತ್ಯಜಿಸಿ ಒಂದು ತಿಂಗಳಾಗಿದೆ. ತಾಯಿ ಕಳೆದುಕೊಂಡ ನೋವಿನಿಂದ ನಿಧಾನವಾಗಿ ಜಾಹ್ನವಿ ಹೊರಗೆ ಬರ್ತಿದ್ದಾಳೆ. ಫೋಟೋದಲ್ಲಿ ಇಶಾನ್ ಕೈ ಹಿಡಿದಿರುವ ಜಾಹ್ನವಿ ನಗ್ತಿದ್ದಾಳೆ. ದಢಕ್ ಚಿತ್ರದ ಶೂಟಿಂಗ್ ಕೋಲ್ಕತ್ತಾದ ನ್ಯೂ ಮಾರ್ಕೆಟ್ ನಲ್ಲಿ ನಡೆಯುತ್ತಿದೆ.

ಮಾರ್ಕೆಟ್ ನಲ್ಲಿ ಸಾಮಾನ್ಯ ಜೂಡಿ ತೊಟ್ಟಿರುವ ಜಾಹ್ನವಿ, ಇಶಾನ್ ಕೈ ಹಿಡಿದು ನಡೆಯುತ್ತಿದ್ದಾಳೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಜಿ ಸ್ಟುಡಿಯೋದ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಿಸಲಾಗುತ್ತಿದೆ. ಜುಲೈ 6ರಂದು ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಕೆಲ ದೃಶ್ಯ ಹಾಗೂ ಫೋಟೋ ವೈರಲ್ ಆಗಿತ್ತು. ಇದ್ರಿಂದ ಎಚ್ಚೆತ್ತ ಕರಣ್ ಜೋಹರ್ ಶೂಟಿಂಗ್ ಸೆಟ್ ಗೆ ಮೊಬೈಲ್ ಬ್ಯಾನ್ ಮಾಡಿದ್ದರು.

ತಾಯಿ ಕೊನೆ ಆಸೆಯನ್ನು ಪೂರೈಸಲು ಜಾಹ್ನವಿ ಮುಂದಾಗಿದ್ದಾಳೆ. ಆದಷ್ಟು ಬೇಗ ಚಿತ್ರ ತೆರೆಗೆ ತರಲು ಬೇಗ ಬೇಗ ಶೂಟಿಂಗ್ ಮಾಡಲಾಗ್ತಿದೆ. ಸಮಯಕ್ಕೆ ಸರಿಯಾಗಿ ಚಿತ್ರ ಬರಲಿ ಎನ್ನುವ ಕಾರಣಕ್ಕೆ ಶ್ರೀದೇವಿ ಮರಣದ 12 ದಿನದ ನಂತ್ರ ಜಾಹ್ನವಿ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...