alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಗಳ ಜೊತೆ ಶ್ರೀದೇವಿ ಬೈಕ್ ಸವಾರಿಯ ವಿಡಿಯೋ

ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಟಿ ಶ್ರೀದೇವಿ ಇನ್ನು ನೆನಪು ಮಾತ್ರ. ಫೆಬ್ರವರಿ 24ರಂದು ದುಬೈನಲ್ಲಿ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ. ನಿನ್ನೆಯಷ್ಟೆ ಅಗಲಿದ ಕಲಾವಿದೆಗೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಚಿತ್ರರಂಗ ಅಂತಿಮ ವಿದಾಯ ಹೇಳಿದೆ.

ಮಗಳು ಜಾಹ್ನವಿ ಜೊತೆಗೆ ಶ್ರೀದೇವಿ ಬೈಕ್ ಸವಾರಿ ಮಾಡ್ತಿರೋ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಚೊಚ್ಚಲ ಚಿತ್ರ ಧಡಕ್ ಗಾಗಿ ಕಳೆದ ವರ್ಷವೇ ಜಾಹ್ನವಿ ಬೈಕ್ ರೈಡಿಂಗ್ ತರಬೇತಿ ಪಡೆದಿದ್ಲು. ಇದು ಆ ಸಮಯದಲ್ಲಿ ಚಿತ್ರೀಕರಿಸಿದ ವಿಡಿಯೋ ಎನ್ನಲಾಗ್ತಿದೆ.

ಸೇಫ್ಟಿ ಗಾರ್ಡ್, ಹೆಲ್ಮೆಟ್ ತೊಟ್ಟ ಅಮ್ಮ ಶ್ರೀದೇವಿಯನ್ನು ಕೂರಿಸಿಕೊಂಡು ಜಾಹ್ನವಿ ಬೈಕ್ ಓಡಿಸಿದ್ದಾಳೆ. ಈ ವೇಳೆ ಮುದ್ದಿನ ಮಗಳು ಜಾನುಗೆ ಶ್ರೀದೇವಿ ಗೈಡ್ ಮಾಡ್ತಿರೋದು ಕೂಡ ರೆಕಾರ್ಡ್ ಆಗಿದೆ. ಅಮ್ಮ-ಮಗಳ ಪ್ರೀತಿಗೆ ಸಾಕ್ಷಿಯಾಗಿರೋ ವಿಡಿಯೋ ನೆನಪಾಗಿ ಉಳಿದಿದೆ.

Sridevi's last moments with family

Sridevi's LAST BIKE RIDE with Jhanvi Kapoor and dance with Anil Kapoor will just make you emotional!Watch these unseen videos…

Posted by Bollywood Now on Tuesday, February 27, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...