alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟೋಟಕ ಸತ್ಯ ಬಿಚ್ಚಿಟ್ಟ ನಟಿ ಶ್ರೀ ರೆಡ್ಡಿ, ರಾಣಾ ಸಹೋದರನ ಜೊತೆಗಿನ ಫೋಟೋ ಲೀಕ್

ಕಾಸ್ಟಿಂಗ್ ಕೌಚ್ ವಿರುದ್ಧ ಸಿಡಿದೆದ್ದಿದ್ದ ನಟಿ ಶ್ರೀ ರೆಡ್ಡಿ, ಸಿನೆಮಾ ಕಲಾವಿದರ ಸಂಘದ ಕಚೇರಿ ಎದುರು ಟಾಪ್ಲೆಸ್ ಆಗಿ ಪ್ರತಿಭಟನೆ ನಡೆಸಿದ್ರು. ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋದು ನಟಿಯ ಆರೋಪ.

ಸುರೇಶ್ ಬಾಬು, ನಟ ರಾಣಾ ದಗ್ಗುಬಾಟಿ ಅವರ ತಂದೆ. ರಾಣಾ ಸಹೋದರನ ವಿರುದ್ಧ ಈಗ ಶ್ರೀ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಸ್ಟುಡಿಯೋದಲ್ಲೇ ಆತ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅಂತಾ ದೂರಿದ್ದಾರೆ.

ತೆಲುಗು ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಶ್ರೀ ರೆಡ್ಡಿ, ಅಭಿರಾಮ್ ತಮಗೆ ಮೋಸ ಮಾಡಿದ್ದಾರೆ ಅಂತಾ ಹೇಳಿದ್ರು. ಅಭಿರಾಮ್ ಹಾಗೂ ಶ್ರೀ ರೆಡ್ಡಿಯ ಕೆಲವೊಂದು ಸಲ್ಲಾಪದ ಫೋಟೋಗಳು ಸಹ ವೈರಲ್ ಆಗಿವೆ. ಮೊದಲು ಶ್ರೀ ರೆಡ್ಡಿ, ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಆದ್ರೆ ಫೋಟೋಗಳು ವೈರಲ್ ಆಗಿದ್ದರಿಂದ ಅಭಿರಾಮ್ ಹೆಸರನ್ನು ಕೊನೆಗೂ ಬಹಿರಂಗಪಡಿಸಿದ್ದಾಳೆ. ಈ ಫೋಟೋಗಳೇ ಅದಕ್ಕೆ ಸಾಕ್ಷಿ ಅಂತಾನೂ ಹೇಳಿದ್ದಾಳೆ. ಈ ಹಿಂದೆ ಸಹ ಹಲವು ನಿರ್ದೇಶಕರು, ನಿರ್ಮಾಪಕರು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ರೆ ಅವಕಾಶ ನೀಡುವುದಾಗಿ ಆಫರ್ ಕೊಟ್ಟಿದ್ದರು ಅಂತಾ ಶ್ರೀ ರೆಡ್ಡಿ ಆರೋಪ ಮಾಡಿದ್ದರು.

ಅದಕ್ಕೆ ಒಪ್ಪಿಕೊಂಡರೂ ಆಕೆಗೆ ಅವಕಾಶ ನೀಡಿರಲಿಲ್ಲವಂತೆ. ನಗ್ನವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶ್ರೀ ರೆಡ್ಡಿಗೆ ನಿಷೇಧ ಹೇರುವ ಬಗ್ಗೆ ಚಿತ್ರ ಕಲಾವಿದರ ಸಂಘ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...