alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಶಾಂತ್ ಜೈಲು ಸೇರಿದಾಗ ಅಡುಗೆ ಮನೆಯಲ್ಲಿ ಮಲಗ್ತಿದ್ದರಂತೆ ಪತ್ನಿ….

ಈ ಬಾರಿ ಬಿಗ್ ಬಾಸ್ ಸರಣಿ 12 ಕ್ಕೆ ಕ್ರಿಕೆಟರ್ ಶ್ರೀಶಾಂತ್ ಬಂದಿದ್ದಾರೆ. ಶ್ರೀಶಾಂತ್ ವೃತ್ತಿ ಜೀವನ ವಿವಾದದಿಂದ ಕೂಡಿದೆ. ಮ್ಯಾಚ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದ ಶ್ರೀಶಾಂತ್ ಜೈಲು ಸೇರಿದ್ದರು. ಈ ವಿಚಾರ ಎಲ್ಲರಿಗೂ ಗೊತ್ತು. ಜೈಲಿಗೆ ಹೋದ ವೇಳೆ ಕುಟುಂಬಸ್ಥರು ಹೇಗಿದ್ರು ಎಂಬುದನ್ನು ಶ್ರೀಶಾಂತ್, ಬಿಗ್ ಬಾಸ್ ಮನೆಯವರ ಮುಂದೆ ಹೇಳಿದ್ದಾರೆ.

ಶ್ರೀಶಾಂತ್ ಜೈಲು ಸೇರಿದ್ದ ವೇಳೆ ಪತ್ನಿ ಭುವನೇಶ್ವರಿ ಅವ್ರ ಕೈ ಬಿಡಲಿಲ್ಲವಂತೆ.ಶ್ರೀಶಾಂತ್ ಜೈಲಿನಲ್ಲಿದ್ದಾಗ ಪತ್ನಿ ಭುವನೇಶ್ವರಿ ಅಡುಗೆ ಮನೆಯಲ್ಲಿ ಮಲಗುತ್ತಿದ್ದರಂತೆ. ಪತಿಯ ಕಷ್ಟದಲ್ಲಿ ತಾನೂ ಭಾಗಿಯಾಗಬೇಕು ಎನ್ನುವ ಕಾರಣಕ್ಕೆ ಭುವನೇಶ್ವರಿ ಹೀಗೆ ಮಾಡಿದ್ದರಂತೆ.

ಸೆಪ್ಟೆಂಬರ್ 2013 ರಲ್ಲಿ ಮ್ಯಾಚ್ ಫಿಕ್ಸಿಂಗ್ ಕೇಸ್ ನಲ್ಲಿ ಶ್ರೀಶಾಂತ್ ಗೆ ಜೀವಮಾನದ ನಿಷೇಧ ಹೇರಲಾಗಿತ್ತು. ಅದೇ ತಿಂಗಳು ಶ್ರೀಶಾಂತ್ ಮದುವೆ ನಡೆಯಬೇಕಿತ್ತು. ಆರೋಪ ಹೊತ್ತಿದ್ದ ಶ್ರೀಶಾಂತ್ ಖಿನ್ನತೆಗೊಳಗಾಗಿದ್ದರಂತೆ. ಎಲ್ಲ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಈ ವೇಳೆ ಭುವನೇಶ್ವರಿ ತಂದೆ, ಮಗಳ ಮದುವೆ ಪ್ರಸ್ತಾಪವನ್ನು ಇಟ್ಟರಂತೆ. 6 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಶ್ರೀಶಾಂತ್ ಮನಸ್ಸು ಬದಲಿಸಿ ಭುವನೇಶ್ವರಿ ಜೊತೆ ದಾಂಪತ್ಯ ಶುರುಮಾಡುವ ನಿರ್ಧಾರಕ್ಕೆ ಬಂದ್ರಂತೆ.

ಶ್ರೀಶಾಂತ್ ಗಿಂತ ಭುವನೇಶ್ವರಿ 9 ವರ್ಷ ಚಿಕ್ಕವರು. ಮದುವೆ ನಂತ್ರ ಶ್ರೀಶಾಂತ್ ಜೈಲು ಸೇರಬೇಕಾಯ್ತು. ಆಗ ಭುವನೇಶ್ವರಿ ಅಡುಗೆ ಮನೆಯಲ್ಲಿ ಮಲಗುತ್ತಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...