alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟ ದಿ. ಎನ್.ಟಿ.ಆರ್. ನಿವಾಸ ಮಾರಾಟಕ್ಕೆ

ತೆಲುಗು ಚಿತ್ರರಂಗದ ಖ್ಯಾತ ನಟ, ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ. ಎನ್.ಟಿ. ರಾಮರಾವ್ ಅವರ ಚೆನ್ನೈನ ಟಿ. ನಗರದಲ್ಲಿನ ನಿವಾಸವನ್ನು ಮಾರಾಟ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಚೆನ್ನೈನಲ್ಲಿ ನಡೆಯುತ್ತಿದ್ದ ವೇಳೆ ಎನ್.ಟಿ.ಆರ್., ಟಿ. ನಗರದ ಬಜುಲ್ಲಾ ರಸ್ತೆಯಲ್ಲಿ 8 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದ ಈ ಬೃಹತ್ ಬಂಗಲೆಯನ್ನು ಖರೀದಿಸಿದ್ದರು.

1953 ರಿಂದ 1980 ರವರೆಗೆ ಇಲ್ಲಿಯೇ ವಾಸವಾಗಿದ್ದ ಎನ್.ಟಿ.ಆರ್. ನಿವಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವಾಸ್ತು ಪ್ರಕಾರ ನವೀಕರಿಸಿಕೊಂಡಿದ್ದರು. ನಂದಮೂರಿ ಹೌಸ್ ಎಂದು ಈ ನಿವಾಸಕ್ಕೆ ಹೆಸರಿಡಲಾಗಿದ್ದು, ಇಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಎನ್.ಟಿ.ಆರ್. ಹಲವು ಹಿಟ್ ಚಿತ್ರಗಳನ್ನು ನೀಡಿದ್ದರು.

ತೆಲುಗು ಚಿತ್ರರಂಗ ಹೈದ್ರಾಬಾದ್ ಗೆ ಸ್ಥಳಾಂತರಗೊಂಡ ಬಳಿಕ ಎನ್.ಟಿ. ರಾಮರಾವ್ ಕೂಡಾ ಹೈದ್ರಾಬಾದ್ ನಲ್ಲಿ ನೆಲೆಸಿದ್ದು, ಈ ನಿವಾಸವನ್ನು ಖಾಲಿ ಬಿಡಲಾಗಿತ್ತು. ಇದೀಗ ಕುಟುಂಬಸ್ಥರು ಈ ನಿವಾಸವನ್ನು ಮಾರಾಟ ಮಾಡಲು ಮುಂದಾಗಿದ್ದು, ಹಲವು ಮಂದಿ ಇದನ್ನು ಕೊಳ್ಳಲು ಮುಂದೆ ಬಂದಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...