alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಿಯಾ `ಗರ್ಲ್ಸ್’ ಫೋಟೋದಲ್ಲಿ ರಣಬೀರ್

ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಯುತ್ತಿದೆ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್  ಚಿತ್ರೀಕರಣಕ್ಕಾಗಿ ಬಲ್ಗೇರಿಯಾಕ್ಕೆ ತೆರಳಿದ್ದು ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಅಲಿಯಾ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾಳೆ.

ಫೋಟೋದಲ್ಲಿ ಆಲಿಯಾ ಭಟ್ ಜೊತೆ ಮೇಕಪ್ ಆರ್ಟಿಸ್ಟ್ ಪುನೀತ್ ಬಿ, ಹೇರ್ಸ್ಟೈಲಿಸ್ಟ್ ಪ್ರಿಯಾಂಕ ಬೊರ್ಕಾರ್ ಮತ್ತು ರಣಬೀರ್ ಕಪೂರ್ ಇದ್ದಾರೆ. ಫೋಟೋಕ್ಕೆ ರಣಬೀರ್ ಫೋಸ್ ನೀಡಿಲ್ಲ. ಆಲಿಯಾ ಸೆರೆ ಹಿಡಿದ ಸೆಲ್ಫಿಯಲ್ಲಿ ಹಿಂದೆ ರಣಬೀರ್ ಕಾಣಿಸ್ತಿದ್ದಾನೆ.

ರಣಬೀರ್ ಬಲ್ಗೇರಿಯಾ ಸೌಂದರ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರೆ ಆಲಿಯಾ ಫೋಟೋ ತೆಗೆದಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಈ ಫೋಟೋ ಹಾಕಿರುವ ಆಲಿಯಾ The girls… oh, and Ranbir ಎಂದು ಶೀರ್ಷಿಕೆ ನೀಡಿದ್ದಾಳೆ. ಪುನೀತ್ ಬಿ ಕೂಡ ಅದೇ ಫೋಟೋ ಹಾಕಿದ್ದು Babies for life ಎಂದು ಶೀರ್ಷಿಕೆ ನೀಡಿದ್ದಾರೆ.

ಆಲಿಯಾ ಭಟ್ ಹಾಗೂ ರಣಬೀರ್ ಪ್ರೀತಿಗೆ ಬಿದ್ದಿದ್ದಾರೆಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಿದೆ. ಈ ಬಗ್ಗೆ ರಣಬೀರ್ ಹಾಗೂ ಆಲಿಯಾ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಸಿಂಗಲ್ ಆಗಿರಲು ನನಗೆ ಸಾಧ್ಯವೇ ಇಲ್ಲ ಎಂದು ರಣಬೀರ್ ಕೆಲ ದಿನಗಳ ಹಿಂದಷ್ಟೇ ಹೇಳಿದ್ದ. ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ವೇಳೆ ಹತ್ತಿರವಾಗಿರುವ ಆಲಿಯಾ-ರಣಬೀರ್ ಬಲ್ಗೇರಿಯಾದಲ್ಲಿ ಮತ್ತಷ್ಟು ಆಪ್ತರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...