alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಜೊತೆಗಿನ ಸಂಭಾಷಣೆ ವಿವರ ಬಿಚ್ಚಿಟ್ಟ ಡಿಸೈನರ್

ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ, ನಟಿ ಶ್ರೀದೇವಿ ಅವರ ಆತ್ಮೀಯ ಸ್ನೇಹಿತರಾಗಿದ್ದರು. ಅಗಲಿದ ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ನೆನಪಿನಲ್ಲಿ ಮನೀಶ್ ಮಲ್ಹೋತ್ರಾ ನೋಟ್ ಒಂದನ್ನು ಬರೆದಿದ್ದಾರೆ.

ಫ್ಯಾಷನ್ ಮ್ಯಾಗಝೀನ್ ವೋಗ್ ನಲ್ಲಿ ಇದು ಪ್ರಕಟವಾಗಿದೆ. ಶ್ರೀದೇವಿ ಸಾವನ್ನಪ್ಪಿದ ದಿನ ಮನೀಶ್ ಮಲ್ಹೋತ್ರಾ, ಆಕೆಯೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರಂತೆ. ಆ ದಿನ ಸಂಜೆ ಮನೀಶ್, ಶ್ರೀದೇವಿಗೆ ಕರೆ ಮಾಡಿದ್ದರು.

ಇಬ್ಬರೂ ಸಾಕಷ್ಟು ಹೊತ್ತು ಸಂಭಾಷಿಸಿದ್ದಾರೆ. ಜಾಹ್ನವಿಯ ಬಾಲಿವುಡ್ ಎಂಟ್ರಿ, ಮದುವೆ ಸಮಾರಂಭದಲ್ಲಿ ಶ್ರೀದೇವಿ ಪುತ್ರಿ ಖುಷಿಯ ಲುಕ್ ಬಗ್ಗೆ ಸಹ ಚರ್ಚಿಸಿದ್ದಾರೆ. ಆ ದಿನ ಶ್ರೀದೇವಿ ಏನೇನು ತಿನಿಸುಗಳನ್ನು ಸೇವಿಸಿದ್ದಾರೆ ಅನ್ನೋದನ್ನು ಸಹ ಮನೀಶ್ ವಿಚಾರಿಸಿಕೊಂಡಿದ್ದರಂತೆ.

ಶ್ರೀದೇವಿಯ ಹಠಾತ್ ನಿಧನವನ್ನು ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವಳ ಫೋನ್ ಕರೆಗಾಗಿ ಈಗಲೂ ಕಾಯುತ್ತೇನೆ ಅಂತಾ ಮನೀಶ್ ಮಲ್ಹೋತ್ರಾ ಬರೆದಿದ್ದಾರೆ. 28 ವರ್ಷಗಳಿಂದ ಮನೀಶ್ ಹಾಗೂ ಶ್ರೀದೇವಿ ಮಧ್ಯೆ ಆತ್ಮೀಯ ಗೆಳೆತನವಿತ್ತು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...