alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ಪ್ರಭಾಸ್ ಅಭಿಮಾನಿಗಳಿಗೆ ಸಿಗುತ್ತಾ ಸಿಹಿ ಸುದ್ದಿ

ಟಾಲಿವುಡ್ ನ ಭಾರಿ ಬೇಡಿಕೆಯ ನಟ ಪ್ರಭಾಸ್ 40 ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದರೆ, ಇತ್ತ ಪ್ರಭಾಸ್ ಗೆ ಮದುವೆ ಮಾಡಲು‌ ಕುಟುಂಬದವರು ತಯಾರಿ ನಡೆಸಿಕೊಂಡಿದ್ದಾರೆ.

ಆ.23 ರಂದು 40 ನೇ ವಸಂತಕ್ಕೆ ಕಾಲಿಡಲಿರುವ ಪ್ರಭಾಸ್ ಅವರ‌ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಮಾಡಲು ಅಭಿಮಾನಿಗಳು, ಆಂಧ್ರದೆಲ್ಲೆಡೆ ಸಜ್ಜಾಗಿದ್ದಾರೆ. ಆದರೆ ಪ್ರಭಾಸ್ ಮಾತ್ರ ತಮ್ಮ ಆಪ್ತ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಸಿಂಪಲ್ ಸಂಭ್ರಮಾಚರಣೆ ನಡೆಸಲು ಸಜ್ಜಾಗಿದ್ದು, ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕಾರ್ಯಕ್ರಮ ನಡೆಸಲಿದ್ದಾರೆ ಎನ್ನುಲಾಗುತ್ತಿದೆ.

40 ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಮದುವೆ ಮಾಡಿಕೊಳ್ಳುವಂತೆ ಕುಟುಂಬದಲ್ಲಿ ಒತ್ತಡ ಕೇಳಿಬಂದಿದೆ. ಆದರೆ ಈಗಾಗಲೇ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಈ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ವರ್ಷ ತೆರೆಕಾಣುತ್ತಿರುವ ಬಹು ನಿರೀಕ್ಷಿತ ‘ಸಾಹೋ’ ಚಿತ್ರದ ಬಳಿಕವೇ ಮದುವೆ ಎನ್ನುವ ಮಾತನ್ನು ಆಪ್ತರ ಬಳಿ‌ ಹೇಳಿಕೊಂಡಿದ್ದಾರೆ ಎಂದು ಟಾಲಿವುಡ್ ನಲ್ಲಿ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...