alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಗೆ ಬರ್ತಿದ್ದಾರೆ ಇನ್ನೊಬ್ಬ ಸೌತ್ ಸೂಪರ್ ಸ್ಟಾರ್

ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾಗಳಲ್ಲಿ ವಿಶೇಷ ವ್ಯತ್ಯಾಸ ಕಾಣ್ತಿಲ್ಲ. ದಕ್ಷಿಣ ಭಾರತದ ಅನೇಕ ನಟರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ಧನುಷ್, ಪವನ್ ಕಲ್ಯಾಣ್ ಸೇರಿದಂತೆ ಅನೇಕ ನಟರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಈ ಪಟ್ಟಿಗೆ ಅಲ್ಲು ಅರ್ಜುನ್ ಸೇರ್ತಿದ್ದಾರೆ.

ಅಲ್ಲು ಅರ್ಜುನ್, ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಜೊತೆ 83 ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಶ್ರೀಕಾಂತ್ ಪಾತ್ರದಲ್ಲಿ ನಟಿಸಲಿದ್ದಾರೆ. 1983 ರ ವಿಶ್ವಕಪ್ ಗೆಲುವಿಗೆ ಶ್ರೀಕಾಂತ್ ಮಹತ್ವದ ಪಾತ್ರವಹಿಸಿದ್ದರು. ಈ ಪಾತ್ರಕ್ಕೆ ಅಲ್ಲು ಅರ್ಜುನ್ ಜೀವ ತುಂಬಲಿದ್ದಾರೆ.

ಚಿತ್ರದಲ್ಲಿ ಇನ್ನೂ ಅನೇಕ ಕಲಾವಿದರು ನಟಿಸಲಿದ್ದಾರಂತೆ. ಅನೇಕರ ಜೊತೆ ಮಾತುಕತೆ ನಡೆದಿದೆ. ಕಬೀರ್ ಖಾನ್ ನಿರ್ದೇಶನದ ಚಿತ್ರದಲ್ಲಿ ರಣವೀರ್ ಸಿಂಗ್, ಕ್ರಿಕೆಟರ್ ಕಪಿಲ್ ದೇವ್ ಪಾತ್ರದಲ್ಲಿ ಮಿಂಚಲಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ನಟಿಸುವಂತೆ ಅಲ್ಲು ಅರ್ಜುನ್ ಗೆ ಆಫರ್ ನೀಡಲಾಗಿತ್ತಂತೆ. ಇದಕ್ಕೆ ಅಲ್ಲು ಒಪ್ಪಿಗೆ ನೀಡಿದ್ದಾರೆ. ಶೀಘ್ರವೇ 83 ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...