alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟಿಗೆ ಉದ್ಯಮಿಯಿಂದ ಲೈಂಗಿಕ ಕಿರುಕುಳ

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉದ್ಯಮಿಯನ್ನು ಬಂಧಿಸಲಾಗಿದೆ. ಮುಂದಿನ ತಿಂಗಳು ವಿದೇಶದಲ್ಲಿ ನಡೆಯಲಿರುವ ಈವೆಂಟ್ ಒಂದರ ರಿಹರ್ಸಲ್ ಸಮಯದಲ್ಲಿ ಉದ್ಯಮಿ, ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬಂಧಿತನನ್ನು ಅಲಗೇಸನ್ ಅಂತಾ ಗುರುತಿಸಲಾಗಿದೆ.

ಖ್ಯಾತ ಕೊರಿಯೋಗ್ರಾಫರ್ ಗೆ ಸೇರಿದ ಡಾನ್ಸ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಉದ್ಯಮಿ, ನಟಿಯ ಬಳಿ ಲೈಂಗಿಕ ವಿಷಯಗಳಿಗೆ ಸಂಬಂಧಪಟ್ಟ ಅಸಂಬದ್ಧ ಸಂಭಾಷಣೆ ನಡೆಸಿದ್ದಾನೆ. ರಿಹರ್ಸಲ್ ಸಂದರ್ಭದಲ್ಲಿ ನಟಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎನ್ನಲಾಗ್ತಿದೆ. ಈ ಬಗ್ಗೆ ಅಮಲಾ ಪೌಲ್ ಪೊಲೀಸರಿಗೆ ದೂರು ನೀಡಿದ್ದರು.

ಬಹಳ ದಿನಗಳಿಂದ ಉದ್ಯಮಿ, ನಟಿಯನ್ನು ಹಿಂಬಾಲಿಸುತ್ತಿದ್ದ ಅಂತಾನೂ ಚೆನ್ನೈ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದು, ಅಸುರಕ್ಷತೆಯ ಭಾವನೆ ಕಾಡುತ್ತಿದೆ ಅಂತಾ ಅಮಲಾ ಪೌಲ್ ಹೇಳಿದ್ದಾರೆ. ಉದ್ಯಮಿ ವಿರುದ್ಧ ಅಮಲಾ ಮಾಡಿರೊ ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...