alex Certify
ಕನ್ನಡ ದುನಿಯಾ       Mobile App
       

Kannada Duniya

1 ಕೋಟಿ ರೂಪಾಯಿ ಆಫರ್ ನಿರಾಕರಿಸಿ ನಟಿ

ಬಾಲಿವುಡ್ ನಟಿ ನುಸ್ರತ್ ಬರೂಚಾ ಬಹುಬೇಡಿಕೆ ನಟಿಯಾಗಿದ್ದಾಳೆ. ಒಂದಾದ ಮೇಲೆ ಒಂದು ಚಿತ್ರಕ್ಕೆ ಆಫರ್ ಬರ್ತಿದೆ. ಸೋನುಕಾ ಟಿಟು ಕಾ ಸ್ವೀಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಟಿಗೆ ಈಗ ಭರ್ಜರಿ ಬೇಡಿಕೆ. ಸೋನು ಕಾ ಟಿಟು ಕಾ ಸ್ವೀಟಿ ಚಿತ್ರದಲ್ಲಿ ನುಸ್ರತ್ ಗೆ ಒಳ್ಳೆ ಪಾತ್ರ ಸಿಕ್ಕಿತ್ತು. ಚಿತ್ರ 100 ಕೋಟಿಗೂ ಹೆಚ್ಚು ವ್ಯಾಪಾರ ನಡೆಸಿತ್ತು.

ಚಿತ್ರದ ನಂತ್ರ ನುಸ್ರತ್ ಅದೃಷ್ಟ ಬದಲಾಗಿದೆ. ದಕ್ಷಿಣ ಭಾರತ ಚಿತ್ರಗಳಲ್ಲೂ ನಟಿಸಲು ಬೇಡಿಕೆ ಬರ್ತಿದೆ. ದಕ್ಷಿಣ ಭಾರತದ ನಿರ್ಮಾಪಕರೊಬ್ಬರು ನುಸ್ರತ್ ಗೆ 1 ಕೋಟಿ ರೂಪಾಯಿ ಆಫರ್ ನೀಡಿದ್ದರು. ಆದ್ರೆ ನುಸ್ರತ್ ಇದನ್ನು ನಿರಾಕರಿಸಿದ್ದಾಳೆ. ನುಸ್ರತ್ ಗೆ ಹಣ ಮುಖ್ಯವಲ್ಲವಂತೆ. ಹಣಕ್ಕಿಂತ ಗುಣಮಟ್ಟದ ಚಿತ್ರ ಮುಖ್ಯ ಎಂದು ನುಸ್ರತ್ ಹೇಳಿದ್ದಾಳೆ.

ಚಿತ್ರ ನಿರಾಕರಿಸಿದ್ದೇನೆ ಎಂದ್ರೆ ಪ್ರಾದೇಶಿಕ ಚಿತ್ರಗಳನ್ನು ಮಾಡುವುದಿಲ್ಲವೆಂದರ್ಥವಲ್ಲ. ನಟಿಯಾಗಿ ಸ್ಪರ್ಧೆ ನಡೆಸುವಂತಹ ಪಾತ್ರಗಳಲ್ಲಿ ನಟಿಸಲು ನಾನು ಇಚ್ಛಿಸುತ್ತೇನೆ. ಪ್ರಾದೇಶಿಕ ಚಿತ್ರಗಳಲ್ಲೂ ನಾನು ನಟಿಸುತ್ತೇನೆ. ರೋಮಾಂಚಕವಾದ ಹಾಗೂ ಸಾಹಸಮಯ ಪಾತ್ರ ನನಗೆ ಇಷ್ಟವೆಂದು ನುಸ್ರತ್ ಹೇಳಿದ್ದಾಳೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈಗ ನಾನು ಏನು ಮಾಡ್ತಿದ್ದೇನೋ ಅದ್ರಲ್ಲಿ ಖುಷಿಯಿದೆ ಎಂದು ನುಸ್ರತ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...